ಆ ತ್ಯಾಗಿಗೊಂದು ನನ್ನ ನಮನ…

ಮೋದಿಜಿಯವರು ಸಂಸತ್ ಪ್ರವೇಶ ಬಾಗಿಲಿಗೆ ನಮಿಸಿದಾಗ, ತಾಯಿ ಭಾರತಿಯ ನೆನೆದು ಗಧ್ಗದಿತರಾದಗ “समुद्रवसने देवि पर्वतस्तनमण्डले । विष्णुपत्नि नमस्तुभ्यं पादस्पर्शं क्षमस्वमे ॥” ಎಂಬ ಶ್ಲೋಕ ನೆನಪಿಗೆ ಬರುತಿತ್ತು, ಭಾರತಿಯ ಯುವ ಪೀಳಿಗೆ ಮರೆಯುತ್ತಿರುವ ಸಂಸ್ಕಾರವನ್ನ ನೆನಪಿಸುವಂತಿತ್ತು. ಮೋದಿಜಿಯವರು ಒಳ ಬಂದು ಹಿರಿಯರ ಪಾದಗಳಿಗೆ ನಮಸ್ಕರಿಸಿ ತಾಯಿ ಭಾರತಿಯ ಸೇವೆಯನ್ನ ದಲಿತರ,  ಶೋಷಿತರ, ಬಡವರ, ಸೇವೆ ಎಂದಾಗ ಅದೇನೊ ಎದೆ ಹೆಮ್ಮೆಯಿಂದ ಉಬ್ಬಿತ್ತು. ಬಾ. ಜ. ಪವು ತಾಯಿ ಭಾರತಿಯಂತೆ ನನ್ನ ತಾಯಿ ಎಂದು ಎದೆ ತಟ್ಟಿ ಹೇಳಿದ ಕ್ಷಣಗಳು ಭಾವನಾತ್ಮಕ ಮತ್ತು ಚರಿತ್ರೆಗೆ ಸೇರಿದ ಕ್ಷಣಗಳೆ. ಭಾರತದ ಯುವಕರ ಕಣ್ಣುಗಳು ದೇಶದ ಒಂದು ವಿಚಾರಕ್ಕೆ ತೇವಗೊಂಡ ದಿನವು ಹೌದು. ಎಷ್ಟೊ ಸಾವಿರಾರು ಯುವಕರ ಮನಸ್ಸುಗಳು ದೇಶ ಸೇವೆ ಮಾಡಬೆಕೆಂದು ಹಂಬಲಿಸಿರಬಹುದು. ಇಂದು ಮಾಧ್ಯಮಗಳಲ್ಲಿ ಕನಸಿನಲ್ಲೂ ಸಹ ಬಾ. ಜ. ಪ ವನ್ನ ವಿರೋದಿಸುತಿದ್ದ ಮಂದಿಯ ಮನಸ್ಸು ಹೊಗಳುವ, ಹೊಸ ಆಶಾಭಾವದಿಂದ ಮೋದಿಜಿಯನ್ನ ನೋಡುವ ಮಟ್ಟಿಗೆ ಬಂದು ನಿಂತಿತಲ್ಲ ಇದಕ್ಕಿಂತ ಖುಷಿ ಎನಿದೆ ಹೇಳಿ. ಇಡಿ ದೇಶ ಹೊಸ ಕನಸುಗಳನ್ನು ಮೋದಿ ಎಂಬ ಸಂತನ ಮೂಲಕ ಸಕಾರಗೊಳಿಸಿಕೊಳ್ಳಲು ಕಾಯುತಿದೆಯಲ್ಲ ಈ ದಿನ ಅದೆಷ್ಟು ಶ್ರೇಷ್ಟವಿದ್ದಿರಬೇಕು.  ಇದೆಲ್ಲರ ಮದ್ಯೆ ಒಂದು ಮಗು ಮನಸ್ಸು ಚಡಪಡಿಸುತಿತ್ತು, ತ್ಯಾಗವೆಂಬ ಪದವನ್ನ ಮೀರಿ ನಿಂತ ಆ ಜೀವ ತನಗಾದ ಅವಮಾನಗಳಿಗೆ ಕಿಂಚಿತ್ತು ತಲೆಕೆಡಿಸಿಕೊಳ್ಳದೆ ಮಹತ್ಕಾರ್ಯದ ಆದಿಗೆ ಸಾಕ್ಷಿಯಾಗಿ ಎದೆ ಎತ್ತಿ ನಿಂತಿತ್ತು. ಆ ಜೀವ ಬೇರಾವುದಲ್ಲ ಗುರು ಭೀಷ್ಮಚಾರ್ಯರ ಗುಣ ಹೊತ್ತ ಅಡ್ವಾಣಿಜಿ. ಹಿಂದೆ ನರೆಂದ್ರ ಮೋದಿ ವಿಚಾರ ಬಂದಾಗಲೆಲ್ಲ ಹಿರಿಯ ತ್ಯಾಗ ಜೀವಿ ಅಡ್ವಾಣಿಯವರನ್ನ ತುಂಬ ಕೆಟ್ಟದಾಗೆ ನಿಂದಿಸಿದ್ದಾರೆ. ನಿಂದಿಸುವಾಗ ಈ ಹಿರಿಯ ಜೀವಿಯ ಭಾವನೆಯನ್ನ ಅರ್ಥ ಮಾಡಿಕೊಳ್ಳುವಲ್ಲಿ ಎಡವಿ ಬಿಟ್ಟೆವು. ಹಣದ ಆಸೆಗೆ ಪತ್ರಿಕೋದ್ಯಮವನ್ನ ಮಾರಿಕೊಂಡು ನೈತಿಕ ಮೌಲ್ಯಗಳಿಗೆ ಬೆಂಕಿ ಇಟ್ಟು ವ್ಯಭಿಚಾರ ಮಾಡುವವರ ಮಾತಿಗೆ ಬೆಲೆ ಕೊಟ್ಟೆವಲ್ಲ ನಮಗಿಂತ ಮೂರ್ಖರು ಇನ್ನೆಲ್ಲಿ ಸಿಕ್ಕಿಯಾರು ಹೇಳಿ.  ತುಂಬ ಜನ ಇತಿಹಾಸವನ್ನ ಇಣುಕಿ ನೊಡುವ ಗೋಜಿಗೆ ಹೊಗುವುದಿಲ್ಲ. ಜನ ಸಂಘ ದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪದ್ಯಾಯರ ನಂತರ ಅಟಲ್ ಜಿ ಸಂಸತ್ ನಲ್ಲಿ ತಮ್ಮ ಪ್ರಕರತೆಯ ಹೊರಾಟ ನಡೆಸಿದರೆ, ಬೀದಿಗಿಳಿದು ದೇಶ ಸುತ್ತಿದವರು ಇದೆ ಬಾ. ಜ. ಪ ಭೀಷ್ಮ ಅಡ್ವಾಣಿಜಿ. ತುರ್ತು ಪರಿಸ್ಥಿಯಲ್ಲಿ ಬರೋಬ್ಬರಿ ಎರಡು ವರ್ಷ ಈ ಇಬ್ಬರು ಜೈಲಿನಲ್ಲಿದ್ದು ಪುನಹ ಹೊರಗೆ ಬಂದು ಅದೆ ಹುಮ್ಮಸ್ಸಿನಲ್ಲಿ ಪಕ್ಷ ಕಟ್ಟುವುದು ದೇಶ ಭಕ್ತರಿಗೆ ಮಾತ್ರ ಸಾದ್ಯವಲ್ಲವ? ಆಗ ಯಾವ ಮಾದ್ಯಮಗಳಿದ್ದವು ಹೇಳಿ,  ಹೊಡೆದರೆ ಹೊಡೆಸಿಕೊಂಡು ಬಡಿದರೆ ಬಡಿಸಿಕೊಂಡು ಅರೆ ಬರೆ ಹೊಟ್ಟೆಯಲ್ಲಿ ಪಕ್ಷ ಕಟ್ಟಿದ ಆ ಜೀವಗಳಿಗೆ ಯಾವ ಬೆಲೆ ಕೊಟ್ಟಿದ್ದೆವೆ. ಅವರುಗಳ  ತ್ಯಾಗದ ಋಣದಲ್ಲಿದ್ದೆವೆ ಅನ್ನುವ ಕನಿಷ್ಟ ಮನಸ್ಸು ಇಲ್ಲದಿದ್ದರೆ ಹೇಗೆ. 1998ರಲ್ಲಿ ರಥಯಾತ್ರೆಯ ಮೂಲಕ ಆಧಿಕಾರಕ್ಕೆ ತಂದು ಅಟಲ್ ಜಿ ಕೈಯಲ್ಲಿ ಆಧಿಕಾರ ಕೊಟ್ಟರಲ್ಲ ಆ ತ್ಯಾಗಿಗೆ ಯಾವ ರೀತಿ ಗೌರವ ಸಿಗಬೇಕಿತ್ತು ಹೇಳಿ.  ಹೌದು ಮೊದ ಮೊದಲು ಮಗುವಿನಂತೆ ಹಠ ಹಿಡಿದಿರಬಹುದು ಆದರೆ ಮಾದ್ಯಮಗಳು ಒಂದಕ್ಕೆ ಹತ್ತು ಸೆರಿಸಿ ಹೇಳಿದ ಕತೆಯನ್ನ ನಿಜ ಎಂದು ನಂಬಿ ಅವರನ್ನ ನಿಂದಿಸುವ ಮಟ್ಟಿಗೆ ಇಳಿದೆವಲ್ಲ ಇಗಾಲಾದರು ನಮ್ಮ ಅಂತಃಕರಣ ಆ ಹಿರಿಯ ಜೀವಿಯ ಕ್ಷಮೆಯಾಚಿಸುತ್ತದೆಯ? ಬಾ. ಜ. ಪ ದ ಓಳಗೆ ಚರ್ಚೆ ನಡೆಸುವುದೆ ತಪ್ಪಾದರೆ ಪ್ರಜಾತಂತ್ರಕ್ಕೆ ಬೆಲೆ ಎಲ್ಲಿದೆ ಹೇಳಿ. ಇಲ್ಲಿ ಮೋದಿಜಿ ಅಡ್ವಾಣಿಜಿಯವರನ್ನ ಗುರುವಿನಂತೆ ಸ್ವಿಕರಿಸಿ ಗೌರವಿಸಿದ್ದಾರೆ, ಅಡ್ವಾಣಿಜಿ ಮೋದಿಜಿಯನ್ನ ಎತ್ತರಕ್ಕೆ ಬೆಳಸಿ ದೇಶಕ್ಕೆ ನೀಡಿದ್ದಾರೆ ಇಬ್ಬರಲ್ಲೂ ದ್ವೇಷವಿಲ್ಲ, ಆದರೆ ಮಾದ್ಯಮಗಳ ತಾಳಕ್ಕೆ ಕುಣಿದವರು ನಾವು.  ಸಂಸತ್ ಭವನದ ಒಳಗೆ ಮೋದಿಜಿಯನ್ನ ಶಾಶಕಾಂಗದ ನಾಯಕ ಎಂದು ಘೋಷಿಸಿ ತಬ್ಬಿ ಆಶ್ರೀವಾದ ಮಾಡಿ ತನ್ನ ಜೀವಮಾನದ ಕನಸನ್ನ ತನ್ನ ಶಿಷ್ಯನ ಕೈಯಲ್ಲಿ ಇಡುತಿದ್ದೆನೆ ಎಂದು  ಹೆಮ್ಮೆಯಿಂದ ಎಲ್ಲರತ್ತ ಕೈಯೆತ್ತಿ ಬೀಗಿದರಲ್ಲ ಆ ಕಣ್ಣಂಚಿನ ಸಾರ್ಥಕ ಹನಿಗಳು ನಮ್ಮನ್ನು ಕಾಡಿದರೆ ಸಾಕು.  ಹೌದು ಇನ್ನು ಈ ದೇಶ ಕಂಡ ಹಿರಿಯ ಮುತ್ಸದ್ದಿ ಜೀವ ತೆರೆ ಮರೆಗೆ ಸರಿಯುವ ದಿನಗಳು ಬಾರಿ ದೂರವಿಲ್ಲ.  ಆದರೆ ಅವರು ಇನ್ನಷ್ಟು ದಿನ ನಮಗೆ ಮಾರ್ಗದರ್ಶನ ನೀಡಲಿ ಎನ್ನುವುದು ನನ್ನಂತವರ ಬಯಕೆ.  ವಂದೇಮಾತರಂ. .

Categories: , ,

Leave a Reply

Your email address will not be published. Required fields are marked *