ಭಾರತ ಕೋಮುವಾದಿಯಾದರೆ ನಾವು ಹೊರಹೊಗುತ್ತೆವೆಂಬ ಅಣಿಮುತ್ತುಗಳು ಫಾರುಕ್ ಅಬ್ಧುಲ್ಲರವರ ಬಾಯಿಂದ ಮೊನ್ನೆ ಉದಿರಿಬಿಟ್ಟವಲ್ಲ ಆಗ ಯಾರದರು ಸ್ವಘೋಷಿತ ಬುದ್ದಿಜೀವಿಗಳು ವಿರೋದಿಸಿದ್ದನ್ನು ಕೇಳಿದ್ದಿರ? ಇಲ್ಲ ಯಾರು ಪ್ರಶ್ನೆ ಮಾಡುವ ಗೊಜಿಗೆ ಹೊಗಲಿಲ್ಲ ಯಾಕೆಂದರೆ ಅವರು ಜಾತ್ಯತಿತವಾದಿಯಂತೆ. ಅವರ ಮೆಲೆ ಚುನಾವಣ ಆಯೋಗವು ಕಣ್ಣು ಮುಚ್ಚಿಕುಳಿತಿತಲ್ಲ ಯಾರು ಇ ದೇಶದ ಅಖಂಡತೆ ಬಗ್ಗೆ ತಲೆಕೆಡಿಸಿ ಕೊಳ್ಳಬೇಕು ಹೇಳಿ. ಇಂತಹ ಗಂಭೀರ ವಿಚಾರಗಳ ಬಗ್ಗೆ ತಲೆಕೆಡಿಸಿ ಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಮೊತ್ತವನ್ನೆ ತೆರಬೇಕಾಗಿಬರಬಹುದು. ಇರಲಿ ಆದರೆ ಕಳೆದ ಡಿಸೆಂಬರ್ 1 ರ ಜಮ್ಮುವಿನ ಲಲ್ಕಾರ್ ಸಮಾವೇಶದಲ್ಲಿ ನರೇಂದ್ರಮೋದಿ 370ನೆ ವಿದಿಯ ಬಗ್ಗೆ ಮಾತನಾಡಿದ್ದೆ ತಡ ಹಸಿದು ಕುಳಿತ ಜಾತ್ಯಾತೀತ ನೆಮ್ ಪ್ಲೆಟ್ ಹಾಕಿಕೊಂಡವರು, ಎಡಪಂತಿಯರು, ಬುದ್ದಿಜೀವಿ ಹಣೆಪಟ್ಟಿ ಕಟ್ಟಿಕೊಂಡ ರಾಜಕೀಯ ಚೇಲಗಳು ಮೋದಿಯನ್ನು ವಿರೋಧಿಸಲೇಬೇಕೆಂಬ ಬರದಲ್ಲಿ ಬಾಯಿಗೆ ಬಂದ ಹೇಳಿಕೆ ನೀಡಿದರು. ಮಾದ್ಯಮಗಳಲೆಲ್ಲ ಮೋದಿ ಭಾರಿ ತಪ್ಪೆಸಗಿದ್ದಾರೆ, ಅವರಿಗೆ ಸಂವಿಧಾನವೇ ಗೊತ್ತಿಲ್ಲ, ಇತಿಹಾಸ ಗೊತ್ತಿಲ್ಲ, ದೇಶದಲ್ಲಿ ಗೊಂದಲ ಸೃಷ್ಠಿಸುತಿದ್ದಾರೆ. ಎಲ್ಲಾ ದೊಡ್ಡ ದೊಡ್ಡ ಮಾತುಗಳೇ. ಆದರೆ ಮೋದಿಯನ್ನು ತೆಗಳುವಾಗ ಇರುವ ಹುಮ್ಮಸ್ಸು ಜಮ್ಮು ಕಾಶ್ಮಿರದ ಸಮಸ್ಯೆ ಬಗ್ಗೆ ಚರ್ಚೆ ಆಗುವಾಗ ಇರುವುದೇ ಇಲ್ಲ, ಆದರೆ ಸಾಮಾನ್ಯ ಭಾರತಿಯರಾದ ನಾವು ಚರ್ಚಿಸುವ ಅಗತ್ಯತೆ ಇದೆ, ಏಕೆಂದರೆ ಈ ದೇಶ ನಮ್ಮದು ಇದನ್ನು ಉಳಿಸಿಕೊಳ್ಳುವ ಹೊಣೆಯು ನಮ್ಮದೇ. ದೇಶ ಸಮಸ್ಯೆಯಿಂದ ನರಳುತ್ತಿರುವಾಗ ಯಾವ ಬುದ್ದಿ ಜೀವಿಯೂ, ಪ್ರಗತಿಪರರು ಸಹಾಯಕ್ಕೆ ಬಂದ ಇತಿಹಾಸವಿಲ್ಲ. ಜಮ್ಮು ಕಾಶ್ಮಿರ ನೆಮ್ಮದಿಯ ತಾಣವ ? ಭಾರತೀಯ ಒಕ್ಕೂಟ ವ್ವವಸ್ಥೆಯನ್ನು ಎತ್ತಿ ಹಿಡಿಯುತ್ತಿದೆಯೇ ? ಖಂಡಿತವಾಗಿಯು ಇಲ್ಲ. ಇತ್ತಿಚಿನ ನಮ್ಮ ಪ್ರಧಾನಿಯವರ ಜಮ್ಮು ಕಾಶ್ಮಿರ ಬೇಟಿಯ ಸಮಯದಲ್ಲಿ ಅವರನ್ನ ಸ್ವಾಗತಿಸಿದ್ದು ಪ್ರತ್ಯೇಕತಯ ಕೂಗು, ಭಯೊತ್ಪಾದಕರ ಗುಂಡಿನ ಮೊರೆತ, ಪಾಕಿಸ್ಥಾನದ ಧ್ವಜಗಳೆ ಹೊರತು ಬೇರೇನೂ ಅಲ್ಲ . ಹಿಂದೆ ಇಲ್ಲಿ ನಾಮಕವಸ್ತೆಗೂ ಸಹ ಭಾರತದ ಧ್ವಜ ಹಾರಿಸುವಂತಿರಲಿಲ್ಲ , ಆದರೆ ಮುರುಳಿ ಮನೋಹರ ಜೋಶಿಯವರ ಕಾಶ್ಮಿರ ಯಾತ್ರೆ ಅದನ್ನು ಬದಲಿಸಿತು. ಆ ಯಾತ್ರೆಯ ಸಂಪೂರ್ಣ ಹೊಣೆ ಹೊತ್ತವರು ಇದೆ ಮೋದಿ. ತಾಯಿ ಎದೆ ಹಾಲು ಕುಡಿದಿದ್ದರೆ ಕಾಶ್ಮಿರದಲ್ಲಿ ಭಾರತದ ಧ್ವಜ ಹಾರಿಸಿ ಎಂದು ಸವಾಲೊಡ್ಡಿದವರ ವಿರುದ್ದವೆ ಕಾಶ್ಮಿರದ ಲಾಲ್ ಚೌಕದಲ್ಲಿ ಜೋಶಿಯವರ ಜೋತೆಗೂಡಿ ತ್ರಿವರ್ಣ ಧ್ವಜ ಹಾರಿಸಿ ದೇಶದ ಏಕತೆಯ ವಿರುದ್ದ ಮಾತನಾಡುವವರ ವಿರುದ್ದ ಎದೆ ಎತ್ತಿ ನಿಂತಿದ್ದರು. ತಾಯಿ ಭಾರತೀಯ ಮುಕುಟಮಣಿ ಜಮ್ಮ ಕಾಶ್ಮೀರ ಭಗವಾನ್ ಶಂಕರ, ಬುಧ್ಧ, ದೇವಿ ವೈಷ್ಣೋದೇವಿಯವರ ಪಾದ ಸ್ಪರ್ಶದಿಂದ ಭೂಸ್ವರ್ಗವಾಗಿದ್ದ ನಾಡು. ಆದರೆ ಅದೇ ಭೂಮಿ ನಮ್ಮ ಸೈನಿಕರ ನೆತ್ತರನ್ನು ಬಯಸುತ್ತಿದೆ , ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ. ಪ್ರತ್ಯೇಕವಾದದ ಕೂಗು ಉಗ್ರವಾದವಾಗಿ ಇಂಡಿಯ ಗೇಟ್ ಮತ್ತು ಸಂಸತ್ ಭವನದವರೆಗೂ ಬಂದು ನಿಂತಿದೆಯಲ್ಲ ಯಾರನ್ನು ಕೇಳುವುದು ಸ್ವಾಮಿ? 370ನೇ ವಿದಿಯ ಬಗ್ಗೆ ಚರ್ಚೆ ಮಾಡುವ ಸಮಯ ಇನ್ನೂ ಬಂದಿಲ್ಲವೇ? ಸ್ವಾತಂತ್ರ್ಯ ಬಂದು 66ವರ್ಷಗಳು ಕಳೆದು ಹೋದರೂ ಒಂದು ರಾಜ್ಯಕ್ಕೆ ಕೊಟ್ಟಿರುವ ವಿಶೇಷ ಅಧಿಕಾರದ 370ನೆ ವಿದಿಯ ಸಮರ್ಥನೆ ಮಾಡುತ್ತಲೇ ಇದ್ದಾರೆ, ಅದು ಸೃಷ್ಠಿಸುತ್ತಿರುವ ಸಮಸ್ಯೆಗಳನ್ನು ನೊಡಿಯು ಸಹ ನಮ್ಮ ದಿಲ್ಲಿ ಗದ್ದುಗೆ ಭದ್ರತೆಯ ಕಾರಣ ಕೊಟ್ಡು 370ನೆ ವಿದಿಯನ್ನು ಮುಂದುವರಿಸುತ್ತಲೇ ಇದೆ. ಜಾತ್ಯಾತೀತತೆಯ ನಿದ್ದೆ ಗುಳಿಗೆಯ ಮಂಪರಿನಲ್ಲಿ ಜಾಣ ನಿದ್ದೆಗೆ ಜಾರಿರುವ ನಮ್ಮ ಸರ್ಕಾರಕ್ಕೆ ಜಮ್ಮು ಕಾಶ್ಮೀರದ ನಿರಾಶ್ರಿತರ ಕೂಗು ಕೇಳಿಸುತ್ತಲೆ ಇಲ್ಲ, ಇಂತಹ ಘೋರ ಮೌನ ಯಾವ ಪರಿ ಸಮಸ್ಯೆ ಸೃಷ್ಟಿಸಿದೆಯೆಂದರೆ ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಸಮೂದಾಯವೇ ನಿರ್ನಾಮವಾಗಿ ಕೇವಲ ಅವರ ಪಳೆಯುಳಿಕೆಯಷ್ಟೆ ಉಳಿದಿದೆ. 1947ರಲ್ಲಿ ಪಶ್ಚಿಮ ಪಾಕಿಸ್ಥಾನದಿಂದ ನಿರ್ವಾಸಿತರಾಗಿ ಬಂದ ಸುಮಾರು 2ಲಕ್ಷ ಮಂದಿಗೆ ಇಂದಿಗೂ ಕನಿಷ್ಟ ಈ ದೇಶದ ಮೂಲಭೂತ ನಾಗರಿಕ ಹಕ್ಕುಗಳೆ ದೊರೆತಿಲ್ಲ. ಅದರಲ್ಲೂ ಹೆಚ್ಚಿನವರು ಹರಿಜನರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು. ಅಧಿಕಾರಕ್ಕಾಗಿ ಸದಾ ಹಿಂದೂಳಿದವರ ಬಗ್ಗೆ ಮೊಸಳೆ ಕಣ್ಣೀರಿಡುವ ನಾಯಕರಿಗೆ ಜಮ್ಮುಕಾಶ್ಮೀರದಲ್ಲಿ ಗುಲಾಮರಂತೆ ಬದುಕುತ್ತಿರುವ ಅವರ ಗೋಳಿನ ಜೀವನ ಕಾಣಿಸುವುದಿಲ್ಲವೇ. ಪರಿಶಿಷ್ಠ ಬುಡಕಟ್ಟು ಸಮುದಾಯಕ್ಕೆ ರಾಜಕೀಯ ಮಿಸಲಾತಿ ಕೊಡಿಸಬೇಕೆಂದು ಅನ್ನಿಸುತ್ತಲೆ ಇಲ್ಲ. ಕೊನೆಯ ಪಕ್ಷ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನವಾದರೂ ಕೊಡದಿದ್ದರೆ ಅ ಬಡ ಕುಟುಂಬಗಳ ಮಕ್ಕಳು ಹೇಗೆ ವಿದ್ಯಾವಂತರಾಗುತ್ತಾರೆ ? ಕಾಶ್ಮೀರದಿಂದ ಮುಸಲ್ಮಾನರ ದಾಳಿಗೆ ಒಳಗಾಗಿ ತಮ್ಮ ಪರಂಪರೆ , ಮನೆ, ಕುಟುಂಬಸ್ತರನ್ನು ಕಳೆದು ಕೊಂಡು ಇಡಿ ಭಾರತದಾದ್ಯಂತ ಹಂಚಿ ಹೊದ ನಿರಾಶ್ರಿತರ ಸಂಖ್ಯೆ 20ಲಕ್ಷಕ್ಕೆ ಏರಿದೆ, ಬರೀ ಜಮ್ಮು ಒಂದರಲ್ಲೆ 8ಲಕ್ಷ ಜನರಿದ್ದಾರೆ ಅವರ ಜೀವನ ಯಾವ ಪರಿ ಘೋರತೆಯಿಂದ ಕೂಡಿದೆಯೆಂದರೆ ತಮಗೆ ಕೊಟ್ಟ ನಿರಾಶ್ರಿತರ ಬಿಡಾರದಲ್ಲೆ ಇನ್ನು ವಾಸವಾಗಿದ್ದಾರೆ. ಇಡೀ ಕುಟುಂಬದವರೆಲ್ಲ ಸಣ್ಣ ಬಿಡಾರದಲ್ಲಿದ್ದ ಕಾರಣ ಗಂಡ ಹೆಂಡತಿಯರ ನಡುವಿನ ಕನಿಷ್ಟ ಸಂಭಂದ ಕೂಡ ಹಲವಾರು ವರ್ಷಗಳವರೆಗೆ ಇರಲೇ ಇಲ್ಲ , ಹೌದು ಇದ್ಯಾವುದು ಮಾನವ ಹಕ್ಕು ಉಲ್ಲಂಘನೆ ಅನ್ನಿಸುತ್ತಲೆ ಇಲ್ಲವಲ್ಲ. ಅದೇ ದುರಂತ. 1956ರಲ್ಲಿ ಅಂದಿನ ಸರ್ಕಾರ ಪಂಜಾಬಿನಿಂದ ಕಸ ಗುಡಿಸಲೆಂದು ಕರೆಸಿಕೊಂಡ ವಾಲ್ಮೀಕಿ ಸಮುದಾಯದ 75 ಪರಿವಾರಗಳು ಇಂದಿಗೂ ಸಾಮಾನ್ಯ ಪ್ರಜಾಹಕ್ಕುಗಳನ್ನೇ ಹೊಂದಿಲ್ಲ, ಉನ್ನತ ವಿದ್ಯಾಭ್ಯಾಸ ಮಾಡಿರುವ ಅವರ ಮಕ್ಕಳಿಗೆ ಕಸಗುಡಿಸುವುದಷ್ಟೆ ಮೀಸಲಿರುವ ಕೆಲಸ. ಹಾಗಾದರೆ ವಿಶೇಷ ಕಾರಣಕ್ಕಾಗಿ ನೀಡಿದ 370ನೆ ವಿದಿ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಹಕ್ಕನ್ನೆ ಕಸಿಯುತ್ತಿಲ್ಲವೆ? ಜಮ್ಮು ಕಾಶ್ಮೀರದ ಯಾವುದೆ ಹೆಣ್ಣು ಬೇರೆ ರಾಜ್ಯದ ಯಾರನ್ನಾದರು ಮದುವೆಯಾದರೆ ಆ ರಾಜ್ಯದ ಮೆಲಿರುವ ಎಲ್ಲಾ ಹಕ್ಕುಗಳನ್ನು ಕಳೆದು ಕೊಳ್ಳುತ್ತಾರೆ. ಇದು ಮಹಿಳೆಯರ ಹಕ್ಕನ್ನು ಕಸಿಯುತ್ತಿಲ್ಲವ? ಇತ್ತಿಚಿಗೆ ಮಹಿಳೆಯರ ಸಂಗೀತ ಕಾರ್ಯಕ್ರಮಗಳಿಗೆ ನಿಂರ್ಭಂದ ಹೇರಿದ್ದನ್ನು ಕೇಳಿದ್ದಿರಿ, ಇಂತಹ ಕಾನೂನಿನ ಬಗ್ಗೆ ಚರ್ಚೆಯಾಗಲಿ ಎಂದು ಮೋದಿ ಹೆಳಿದರು ಆದರೆ ವಿರೋದ ಮೊಳಕೆಯೊಡೆಯುತ್ತದೆ ಹೊರತು ಚರ್ಚೆಯಾಗುವುದಿಲ್ಲ ಅದೆ ನಮ್ಮ ದುರಂತ. ಅಷ್ಟಕ್ಕೂ ಜಮ್ಮು ಕಾಶ್ಮಿರಕ್ಕೆ 370ನೆ ವಿದಿಯ ಮೂಲಕ ವಿಶೇಷ ಅಧಿಕಾರ ಕೊಡುವ ದರ್ದಾದರು ಏನಿತ್ತು ಹೆಳಿ? ಹಾಗೆ ನೊಡಿದರೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಭಾರತದ ಹಲವಾರು ಕಡೆ ಇಂತಹ ಸಮಸ್ಯೆಗಳಿತ್ತು. ಎಲ್ಲಾ ಕಡೆ 370ನೆ ವಿದಿ ಏಕೆ ಉತ್ತರವಾಗಲಿಲ್ಲ ? ರಾಜಕೀಯ ಗಟ್ಟಿತನದ ಕೊರತೆ ಜಮ್ಮುಕಾಶ್ಮೀರದ ವಿಚಾರದಲ್ಲಿ ಎದ್ದು ಕಾಣಿಸುತ್ತಿದೆ ಅಷ್ಟೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ಧ್ವಜ , ಎರಡು ಸಂವಿಧಾನ ಎಷ್ಟು ಸರಿ? 1952ರಲ್ಲಿ ಮೂರು ಬಿಳಿ ರೇಖೆಗಳಿಂದ ಕೂಡಿದ ಕೆಂಪು ವರ್ಣದ ಧ್ವಜ ಅದಕ್ಕನುಗುಣವಾಗಿ ಪ್ರತ್ಯೇಕ ಸಂವಿದಾನದಡಿಯಲ್ಲಿ ಸದರ್-ಎ-ರಿಯಾಸತ್ (ಗೌವರ್ನರ್), ವಜೀರ್-ಎ-ಅಜಂ (ಪ್ರಧಾನಿ) ಹೀಗೆ ಹಲವಾರು ಹುದ್ದೆಗಳನ್ನು ಜಮ್ಮು ಕಾಶ್ಮೀರ ಸರ್ಕಾರ ತಂದಾಗಿತ್ತು. ಆದರೆ ಪ್ರಜಾಪರಿಷತ್ ಕೈಗೊಂಡ ಸತ್ಯಾಗ್ರಹದಿಂದ ಪ್ರತ್ಯೇಕ ಧ್ವಜ ಮತ್ತು ಸಂವಿಧಾನ ಹೊರತು ಪಡಿಸಿ ಇನ್ನೆಲ್ಲವು ನಿರಸ್ತಗೊಂಡವು. 1947ರ ಜೂನ್ 17ರಂದು “ಭಾರತದ ಸ್ವಾತಂತ್ರ್ಯ ಕಾನೂನು 1947”ನ್ನು ಭ್ರಿಟೀಷ್ ಪಾರ್ಲಿಮೆಂಟ್ ಸ್ವೀಕರಿಸಿ ಜುಲೈ18ಕ್ಕೆ ಅಧಿಕೃತವಾಗಿ ಹೊರಗೆ ತಂದರು. ಈ ಕಾನೂನಿನ ಪ್ರಕಾರ ಭ್ರಿಟಿಷ್ ಆಳ್ವಿಕೆಯ ಭಾರತ ಎರಡಾಗಿ ಭಾರತ ಮತ್ತು ಪಾಕಿಸ್ಥಾನವಾಯಿತು. ಒಟ್ಟು 569 ಸಂಸ್ಥಾನಗಳು ತಮ್ಮ ರಾಜ್ಯದ ಸ್ವಂತ ರಕ್ಷಣಾ ಹಿತದೃಷ್ಠಿಯಿಂದ ಭಾರತ ಮತ್ತು ಪಾಕಿಸ್ಥಾನಕ್ಕೆ ಸೇರಬಹುದು ಮತ್ತು ನಿರ್ದಾರದ ಸಂಪೂರ್ಣ ಹಕ್ಕು ರಾಜರಿಗೆ ನೀಡಿದ್ದರು. ಇದರ ಹೊರತಾಗಿ ಪ್ರತ್ಯೇಕ ದೇಶ ಮಾಡುವಂತಿರಲಿಲ್ಲ ಮತ್ತು ಷರತ್ತು ಬಧ್ಧ ವಿಲಯನದ ಮಾತು ಇರಲಿಲ್ಲ. ಅಸಲಿಗೆ ಧರ್ಮದ ಕಾರಣಕ್ಕಾಗಿ ದೇಶ ಒಡೆಯಲು ಬಿಟ್ಟಿದ್ದೆ ದೊಡ್ಡ ಮುರ್ಖತನ. ಅಂತಹದರಲ್ಲಿ ಎಲ್ಲೋ ಕೂತು ಮಾಡಿದ ಕಾನೂನನ್ನು ಒಪ್ಪಿಕೊಂಡೆವು. ಈ ಕಾನೂನಿನ ಪ್ರಕಾರ ಪಾಕಿಸ್ಥಾನದ ಗಡಿಗೆ ಹೊಂದಿಕೊಳ್ಳದ. ಭಾರತದ ಗಡಿಯನ್ನು ಹಂಚಿಕೊಂಡ ನಮ್ಮ ಕರ್ನಾಟಕವೇನಾದರು ನಾನು ಪಾಕಿಸ್ಥಾನಕ್ಕೆ ಸೇರುತ್ತೆನೆ ಎಂದಿದ್ದರೆ ಪಾಕಿಸ್ಥಾನಕ್ಕೆ ಸೇರಿಸಲು ಸಾದ್ಯವಿತ್ತೆ? ಇರಲಿ ಬಿಡಿ ಕಾನೂನನ್ನು ಒಪ್ಪಿಕೊಂಡಾಗಿತ್ತಲ್ಲ ಅದರಂತೆ ವಿಲಯನ ಕಾರ್ಯವು ಶುರುವಾಯಿತು. ಭಾರತದ ಪುಣ್ಯವೇನೊ ಅದರ ಹೊಣೆ ಹೊತ್ತವರು ಗಟ್ಟಿಗ ಸರ್ಧಾರ್ ವಲ್ಲಭಾಯಿ ಪಟೇಲ್ , ಅಂತು ಕೆಲವರನ್ನು ವಿಧ ವಿಧವಾಗಿ ಒಪ್ಪಿಸಿ, ಕೆಲವರನ್ನು ಬಗ್ಗು ಬಡಿದು ಒಕ್ಕೂಟ ವ್ಯವಸ್ಥಗೆ ಸೇರಿಸಿಯೇಬಿಟ್ಟರು ಆದರೆ ಹೈದರಬಾದು ಪ್ರಾಂತ್ಯದ ರಾಜ ನವಾಬನಂತು ತೀರ ಅತಿರೇಕದಿಂದಲೆ ನಿರಾಕರಿಸಿ ಬಿಟ್ಟಿದ್ದ, ಅದು ಯಾವ ಪರಿ ಇತ್ತೆಂದರೆ 20ಸಾವಿರ ಸೈನಿಕರ ಪಡೆ ಕಟ್ಟಿ, ಪಾಕಿಸ್ತಾನದ ಬೆಂಬಲ ಕೋರಿ , ಶಸ್ತ್ರಾಸ್ರಕ್ಕಾಗಿ 20ಕೋಟಿಯಷ್ಟು ಹಣ ನೀಡಿ ಭಾರತದ ವಿರುದ್ದವೆ ಯುದ್ದಕ್ಕೆ ಸಜ್ಜಾಗಿ ನಿಂತ. ಪಟೇಲರಂತು ಕೆಂಡ ಮಂಡಲರಾಗಿ ಹೊಗಿಬಿಟ್ಟರು, ನಮ್ಮ ನೆಹರು ನವಾಬನ ಓಲೈಕೆಗೆ ನಿಂತರು, ಲಾರ್ಡ್ ಮೌಂಟ್ ಬ್ಯಾಟನ್ ಇಲ್ಲೂ ಕೈಯಾಡಿಸಿದ , ಯಾವುದೂ ಪ್ರಯೋಜನಕ್ಕೆ ಬರಲಿಲ್ಲ, ನಾವಬನ ಗೂಂಡ ರಜಾಕರ ಪಡೆಯ ನಾಯಕ ಕಾಸಿಂ ರಜ್ಮಿ ದೆಹಲಿಗೆ ಬಂದು ಪಟೇಲರ ಜೊತೆ ಮಾತಿಗೆ ಕುಳಿತು ಪಟೇಲರೆ ನಿವೇನಾದರು ಹೈದರಾಬಾದಿಗೆ ನಿಮ್ಮ ಸೈನ್ಯ ತಂದರೆ ಕೊನೆಯ ತನಕ ಹೋರಾಡಿ ಸಾಯುತ್ತೇವೆಯೆ ಹೊರತು ಭಾರತದೊಂದಿಗೆ ವಿಲೀನನಾಗುವುದಿಲ್ಲ ಎಂದು ಬಿಟ್ಟ , ಪಟೇಲರ ಸಿಟ್ಟು ನೆತ್ತಿಗೆರಿತ್ತು. ಭಲೇ ಕಾಸಿಂ ರಜ್ಮಿ ನೀನೇ ಆತ್ಮಹತ್ಯೆಗೆ ತಯಾರಾದ ಮೇಲೆ ನಾನೆನು ಮಾಡಲಿ? ನನ್ನ ಸೈನ್ಯ ತೆಗೆದು ಕೊಂಡು ಬಂದೇ ಬರುತ್ತೇನೆಂದು ಅಭ್ಬರಿಸಿ ಎದ್ದು ಹೊಗಿ ಬಿಟ್ಟರು. ತಿರುಗಿ ಬಂದ ಕಾಸಿಂ ನಾವಬನ ಆಙ್ಞೆಯ ಮೆರೆಗೆ ಯುಧ್ದ ಸಾರಿಬಿಟ್ಟ. ಈಗಿನ ಆಂದ್ರ , ಮಹರಾಷ್ಟ್ರ, ಕರ್ನಾಟಕದ ಹಲವಾರು ಬಾಗಗಳು ಇವರ ದಾಳಿಗೆ ನಲುಗಿ ಹೊದವು, ಅಮಾಯಕ ಹಿಂದುಗಳ ಹತ್ಯೆಯಾಯಿತು, ಹೆಣ್ಣುಮಕ್ಕಳ ಅತ್ಯಾಚಾರವಾಯಿತು, ರೈತರು ನಲುಗಿಹೊದರು , ದಿನ ಇದೇ ಸುದ್ದಿ ಕೇಳುತಿದ್ದ ಪಟೆಲರಿಗೆ ಇನ್ನು ಸುಮ್ಮನೆ ಕೂರಲಾಗಲಿಲ್ಲ. ಸೈನ್ಯವನ್ನು ಹೈದರಬಾದಿನೆಡೆಗೆ ನುಗ್ಗಿಸಿ ಬಿಟ್ಟರು , ನವಾಬನ ಸಹಕಾರಕ್ಕೆ ಪಾಕಿಸ್ಥಾನದಿಂದ ಯುದ್ದ ಸಮಾಗ್ರಿಗಳನ್ನು ಹೊತ್ತ ವಿಮಾನಗಳು ಬೀದರ್ ನತ್ತ ಹಾರಿ ಬಂದವು , ಯುದ್ದ ಶುರುವಾಗೇ ಬಿಟ್ಟಿತು. ಅಷ್ಟೊತ್ತಿಗೆ ನಮ್ಮ ಸೈನ್ಯ ರಜಾಕರ ಹೆಡೆಮುರಿ ಕಟ್ಟಿ ಕಾಸಿಂ ರಜ್ಮಿಯನ್ನು ಬಂದಿಸಿತ್ತು. 1948ರ ಸೆಪ್ಟೆಂಬರ್ 17ರ ವೇಳೆಗೆ ಹೈದರಬಾದ್ ವಿಮೊಚನೆಗೊಂಡಿತ್ತು . ಆದರೆ ಕಾಶ್ಮಿರದ ವಿಚಾರದಲ್ಲಿ ಈ ತರಹದ ಗಟ್ಟಿನಿಲುವುಗಳು ಕಾಣಲೇ ಇಲ್ಲ . ಅಸಲಿಗೆ ಜಮ್ಮು ಕಾಶ್ಮಿರದಲ್ಲಿ ಹೈದರಬಾದಿನಲ್ಲಿದ್ದಷ್ಟು ಸಮಸ್ಯೆ ಇರಲಿಲ್ಲ. ರಾಜ ಹರಿಸಿಂಗನು 1947ರ ಆಕ್ಟೋಬರ್ 26ರಂದು ವಿಲಯನಕ್ಕೆ ಒಪ್ಪಿಕೊಂಡು ಒಪ್ಪಂದದ ಕಾನೂನಿಗನುಗುಣವಾಗಿ ಸಹಿ ಹಾಕಿದ್ದರು. ಅದರಂತೆ ಮೌಂಟ್ ಬ್ಯಾಟನ್ 27 ಆಕ್ಟೋಬರ್ 1947 ರಂದು ಒಪ್ಪಂದವನ್ನು ಸ್ವೀಕರಿಸಿ ಸಹಿ ಹಾಕಿದ್ದ. ಆದರೆ ಇಲ್ಲಿ ರಾಜಕೀಯ ಪಿತೂರಿ ಕೆಲಸ ಮಾಡಿತ್ತು. ಜಿನ್ನಾಗೆ ಮೌಂಟ್ ಬ್ಯಾಟನ್ ನಡುವೆ 1942 ರಲ್ಲೆ ಲಾಹೋರ್ ನಲ್ಲಿ ನಡೆದ ಸಬೆಯಲ್ಲಿ ಜನಾಬಿಪ್ರಾಯ ಕೇಳಿ ಕಾಶ್ಮಿರವನ್ನು ವಿಲಯನ ಮಾಡುತ್ತೆನೆಂದು ಬಿಟ್ಟಿದ್ದ , ಸ್ವಾತಂತ್ರ್ಯ ಬರುವ ಮೊದಲೆ ಅದೆಷ್ಟು ಒಳ ಒಪ್ಪಂದ ಮಾಡಿಕೊಂಡಿದ್ದರೊ ಕಾಣದಾಗಿಹೊಗಿದೆ, ಜಿನ್ನಾನಿಗೆ ಕೊಟ್ಟ ಮಾತಿನಂತೆ ಬ್ಯಾಟನ್ 1947ರ ಭಾರತದ ಸ್ವಾತಂತ್ರ್ಯ ಕಾಯ್ದೆಯನ್ನು ಗಾಳಿಗೆ ತೂರಿ ಆಕ್ಟೋಬರ್ 27ರಂದು ರಾಜ ಹರಿಸಿಂಗನ ವಿಲಯನ ಒಪ್ಪಂದಕ್ಕೆ ವಿರುದ್ದವಾಗಿ ಪತ್ರದ ಮೂಲಕ ನಿಮ್ಮ ರಾಜ್ಯದಲ್ಲಿ ವಿವಾದವಿರುವುದರಿಂದ ಜನಾಭಿಪ್ರಾಯ ಕೇಳಿ ನಂತರ ವಿಲಯನವನ್ನು ಪೂರ್ಣಗೊಳಿಸುತ್ತೆವೆ ಎಂದು ಹರಿಸಿಂಗನಿಗೆ ಕಾನೂನು ಬಾಹಿರ ಟಿಪ್ಪಣಿ ರವಾನಿಸಿ ಗೊಂದಲ ಸೃಷ್ಟಿಸಿದ. ಆದರೆ ಅದನ್ನು ನಮ್ಮ ನೆಹರು ಸಹ ಒಪ್ಪಿ ಬಿಟ್ಟರಲ್ಲ ಅದೇ ನಮ್ಮ ದುರ್ದೈವ. ಜಮ್ಮು ಕಾಶ್ಮಿರವನ್ನು ಪಾಕಿಸ್ತಾನಕ್ಕೆ ಸೆರಿಸಲೇಬೇಕೆಂಬ ಹಠದಿಂದ ರಾಜ ಹರಿಸಿಂಗನಿಗೆ ಬ್ಯಾಟನ್ ಆಮಿಷಗಳನ್ನು ನೀಡಲಾರಂಬಿಸಿದನು. ಇನ್ನೊಂದೆಡೆ ನೆಹರು ಅಪ್ತ ಗೆಳೆಯ ಷೇಕ್ ಅಬ್ಬುಲ್ಲ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಹುಟ್ಟುಹಾಕಿ ಹರಿಸಿಂಗನ ವಿರುದ್ದವೇ ‘ಕಾಶ್ಮಿರ ಬಿಟ್ಟು ತೊಲಗಿ ‘ಎಂಬ ಘೋಷಣೆಯೊಂದಿಗೆ ತಿರುಗಿಬಿದ್ದಿದ್ದ ಆಗ ಮಹಾರಾಜ , ಅಬ್ಧುಲ್ಲಾನನ್ನು ಬಂದಿಸಿದಾಗ ನೆಹರು ಮತ್ತು ರಾಜ ಹರಿಸಿಂಗರ ನಡುವೆ ಮಾರಾ ಮಾರಿಯೆ ನಡೆದಿತ್ತು. ಎಲ್ಲಾಕಡೆ ವೈಮನಸ್ಸುಗಳ ಹುತ್ತವೇ. ದಿಕ್ಕೆಟ್ಟಿದ್ದ ಹರಿಸಿಂಗ ಗೊಂದಲದಲ್ಲಿ ಮುಳುಗಿಬಿಟ್ಟಿದ್ದ . ಇಂತಹ ಸಮಯಕ್ಕೆ ಕಾಯುತಿದ್ದ ಬ್ಯಾಟನ್ ಹರಿಸಿಂಗ ಮತ್ತು ನೆಹರು ನಡುವಿನ ಸಂಭಂದ ಸರಿಯಿಲ್ಲದ ಕಾರಣ ಕೊಟ್ಟು ಕಾಶ್ಮಿರವನ್ನು ಪಾಕಿಸ್ಥಾನದೊಂದಿಗೆ ವಿಲಿನ ಮಾಡುತ್ತೇವೆಂದು ಘೋಷಿಸಿಬಿಟ್ಟ. ಒತ್ತಡಕ್ಕೆ ಬಿದ್ದ ಹರಿಸಿಂಗ ಪಾಕಿಸ್ಥಾನದೊಂದಿಗೆ ತಾತ್ಕಲಿಕ ಒಪ್ಪಂದ ಮಾಡಿಕೊಂಡು ತನ್ನ ರಾಜ್ಯದ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹೊಂದುವ ಹಕ್ಕನ್ನು ವ್ಯಕ್ತಪಡಿಸಿದ್ದರು. ಅಷ್ಟೊತ್ತಿಗಾಗಲೆ ಜಿನ್ನಾ ಲಾಹೋರ್ ಮತ್ತು ರಾವಲ್ಪಿಂಡಿಯಿಂದ ಕಾಶ್ಮಿರಕ್ಕೆ ಬರುತ್ತಿದ್ದ ಅಗತ್ಯವಸ್ತುಗಳ ಜೊತೆಗೆ ದಾರಿಯನ್ನ ತಡೆಹಿಡಿಯ ತೊಡಗಿದ. ಬಾರತದಿಂದ ಇದ್ದದ್ದು ಒಂದೇ ಒಂದು ಕಚ್ಚಾ ಮಾರ್ಗ. ಅದು ಜಮ್ಮುವಿನ ಮೂಲಕವೇ ಹೊಗಬೇಕಿತ್ತು. ಕಾಶ್ಮಿರಿಗಳು ದಿಕ್ಕೆಟ್ಟು ಕೂತರು, ಗೆಳೆಯರೆಂದು ನಂಬಿದ್ದವರೆಲ್ಲ ನೆಹರೂಗೆ ಮೋಸ ಮಾಡಿಬಿಟ್ಟಿದ್ದರು. ಅಂತು ನೆಹರು ವಿಮಾನದ ಮೂಲಕ ಆಹಾರ ಪೂರೈಕೆಗೆ ಶುರುವಿಟ್ಟರು. ಅಸಲಿಗೆ ಪಂಜಾಬಿಗೆ ಹೊಲಿಸಿದರೆ ಜಮ್ಮು ಕಾಶ್ಮಿರ ಅಲ್ಲಿಯವರೆಗೂ ಶಾಂತವಾಗಿಯೇ ಇತ್ತು. ಯಾವಾಗ ಕುಪಿತಗೊಂಡ ಹರಿಸಿಂಗ ಕಾಶ್ಮಿರವನ್ನು ಪಾಕಿಸ್ತಾನದೊಂದಿಗೆ ವೀಲಿನ ಮಾಡುವುದಿಲ್ಲ ಎಂದು ಬಿಟ್ಟರೋ ಆಗ ಜಿನ್ನ ಉರಿದು ಬಿದ್ದ. ಚಾಪೆ ಕೆಳಗೆ ಆಡಿದ ನಾಟಕಗಳೆಲ್ಲ ಹುಸಿಯಾಗಿತ್ತು. ಜಿನ್ನ ತನ್ನ ಸೈನ್ಯವನ್ನು 1947ರ ಆಕ್ಟೊಬರ್ 21 ರ ರಾತ್ರಿಯೇ ಜಮ್ಮು ಕಾಶ್ಮಿರದೆಡೆಗೆ ನುಗ್ಗಿಸಿಬಿಟ್ಟ. ಪಾಕಿಸೈನ್ಯ ಶ್ರೀನಗರದೆಡೆಗೆ ಬರಲಾರಂಬಿಸಿತು , ಪಟೇಲರಿಗೆ ಇನ್ನೂ ಸಂಯಮದಿಂದ ಕೂರುವುದು ಅನಾಹುತವೆಂದು ತಿಳಿದು ದೆಹಲಿಯಿಂದ ಯುದ್ದ ವಿಮಾನಗಳನ್ನು ಶ್ರೀನಗರದಡೆಗೆ ಕಳುಹಿಸಿದರು. ಮೇಹರ್ ಚಂದ್ ಮಹಾರಾಜರನ್ನು ಕಾಶ್ಮಿರಕ್ಕೆ ಕಳುಹಿಸಿ ಕಾಶ್ಮಿರವನ್ನು ಬಾರತದೊಂದಿಗೆ ವಿಲೀನ ಮಾಡಿದರೆ ಅದನ್ನು ರಕ್ಷಿಸುವ ಹೊಣೆ ನಮ್ಮದೆಂಬ ಅಭಯವಿತ್ತರು. ಹರಿಸಿಂಗನು ಪಟೇಲರ ಮಾತಿಗೆ ಸಮ್ಮತಿಸಿ ನಹರು ಮನೆಗೆ ಚರ್ಚೆಗೆ ಬಂದಿದ್ದ. ಆಕ್ಟೋಬರ್ 26ರಂದು ನೆಹರು ಮನೆಯಲ್ಲಿ ಕಡ್ಡಿ ತುಂಡು ಮಾಡಿದಂತೆ ‘ಭಾರತ ಸರ್ಕಾರ ನಮಗೆ ಸಹಕರಿಸದಿದ್ದರೆ ನಾವು ಪಾಕಿಸ್ಥಾನ ದೊಂದಿಗೆ ಹೊಗುತ್ತೆವೆ’ ಎಂದು ಬಿಟ್ಟ. ದೇಶದ ಹಿತದೃಷ್ಟಿಯಿಂದ ಸಮಧಾನಿಸಬೇಕಿದ್ದ ನೆಹರು ಹರಿಸಿಂಗನನ್ನು ಹೊರಹೊಗುವಂತೆ ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಸಿಟ್ಟಿಗೆದ್ದಿದ್ದ ಹರಿಸಿಂಗನನ್ನ ತಣಿಸಿ ಪಾಕಿಸ್ತಾನದೊಂದಿಗೆ ಹೊಗುವ ಅಗತ್ಯ ನಿಮಗಿಲ್ಲ ಎಂದು ಸಮಧಾನಿಸಿದ್ದು ಇದೇ ಪಟೇಲರು. ನೆಹರುರವರ ರಾಧ್ದಾಂತ ನೊಡಿದ ಪಟೇಲರು ತಾಳ್ಮೆ ಕಳೆದುಕೊಂಡೇ ನೆಹರುರವರೇ ನಿಮಗೆ ಕಾಶ್ಮಿರ ಬೇಕೇ, ಬೇಡವೇ ಎಂದು ಸಿಡಿದೆದ್ದರು . ಆಗ ತಣ್ಣಗಾದ ನೆಹರು ಬೇಕು ಎಂದಿದ್ದೆ ತಡ ಯುದ್ದಕ್ಕೆ ಅನುಮತಿ ಕೊಟ್ಟು ಸ್ವತಃ ತಾವೇ ವಿಲ್ಲಿಂಗ್ಟನ್ ನಿಲ್ದಾಣಕ್ಕೆ ಹೋಗಿ ಸೈನಿಕರಿಗೆ ಸ್ಪೂರ್ತಿ ತುಂಬಿ ಶ್ರೀಗರಕ್ಕೆ ವಿಮಾನಗಳನ್ನು ಕಳುಹಿಸಿಕೊಟ್ಟರು. ಇತ್ತ ನಮ್ಮ ಸೈನ್ಯ ಶ್ರೀನಗರ ತಲುಪಿ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಪಾಕಿಸ್ತಾನದ ಗಡಿಗೆ ಬಂದಾಗಿತ್ತು. . ಜಿನ್ನಾನಿಗೆ ಸೋಲು ಖಚಿತವಾಗಿತ್ತು . ಅಷ್ಟರಲ್ಲಿ ನಮ್ಮ ನೆಹರು ಸಾಹೇಬರು ಪಟೇಲರಿಗೂ ತಿಳಿಸದೆ ವಿಶ್ವಸಂಸ್ಥೆ ಬಾಗಿಲು ಬಡಿದು ದೊಡ್ಡ ಪ್ರಮಾದವೆಸಗಿಬಿಟ್ಟರು. ಅಂದು ಮಾಡಿದ ಒಂದು ತಪ್ಪು ಇಂದಿಗೂ ನಮ್ಮನ್ನು ಕಾಡುತ್ತಿದೆ . ವಿಶ್ವಸಂಸ್ಥೆಯ ಭದ್ರತಾ ಮಂಢಳಿ ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿ, ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಹಾಗು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ತೆಗೆದುಹಾಕುವಂತೆ ಸೂಚಿಸಿದರು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು ಎಂದು ಹೇಳಿ ಬಿಟ್ಟಿತ್ತು. ಅವಾಗಲೆ 370ನೇ ವಿದಿಯನ್ನು ತಂದು ನಮ್ಮ ತಲೆಯ ಮೆಲೆ ನಾವೇ ಚಪ್ಪಡಿ ಎಳೆದುಕೊಂಡುಬಿಟ್ಟೆವು. ಇಂದಿಗೂ ನಮ್ಮ ಸರ್ಕಾರಗಳು ಕಾಶ್ಮಿರವನ್ನು ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡೇ ಇಲ್ಲ. ಬದಲಿಗೆ ಪ್ರತ್ಯೇಕತೆ ಕೂಗು ಕಂಡಲೆಲ್ಲ ಹಣದ ಹೊಳೆಯನ್ನೇ ಹರಿಸಿದೆ. ಸಿಕ್ಕಿ ಬಿದ್ದ ಭಯೊತ್ಪಾದಕರಿಗೆ ಸರ್ಕಾರಿ ನೌಕರಿ ಕೊಟ್ಟು ಅವರ ಹೆಂಡತಿ ಮಕ್ಕಳನ್ನು ಸಾಕುವ ಕೆಲಸಕ್ಕೆ ಕೈ ಇಟ್ಟಿದೆ. ಇಡಿ ಭಾರತದ ಮಂದಿಯೆಲ್ಲ ದುಡಿದ ಹಣವನ್ನ ನಮ್ಮ ಕೇಂದ್ರ ಸರ್ಕಾರ ಅತಿ ಹೆಚ್ಚು ಹಣವನ್ನ ಅನುದಾನದ ಮೂಲಕ ಕಾಶ್ಮಿರಕ್ಕೆ ಕೊಡುತ್ತಿದೆ. ಪ್ರತ್ಯೇಕತೆ ಕೂಗು ಜೀವಂತವಾಗಿರಿಸಿದಷ್ಟು ಹಣ ಬರುತ್ತದೆ ನಾವು ಆರಾಮಾಗಿ ಇರಬಹುದೆಂಬ ಸ್ಪಷ್ಟತೆ ಕಾಶ್ಮಿರೀ ರಾಜಕಾರಿಣಿಗಳಿಗೆ ತಿಳಿದಿದೆ. ಇಂತಹ ಕುಲಗೆಟ್ಟ ನೀತಿಗಳು ಈಗಾಗಲೆ ಜಮ್ಮು ಕಾಶ್ಮೀರದ ಗಡಿಯನ್ನು ಬದಲಿಸಿವೆ. ನಾವು ಭೂಪಟದಲ್ಲಿ ನೋಡಿರುವ ಜಮ್ಮುವಿನ 36315ಚ. ಕಿಮಿನಲ್ಲಿ 10315ಚ. ಕೀಮಿ, ಕಾಶ್ಮೀರದ 22000 ಚ. ಕೀಮಿನಲ್ಲಿ 6000 ಚ. ಕೀಮಿ, ಲಡಾಖ್ ನ 1, 64, 748 ಚ. ಕೀಮಿನಲ್ಲಿ 1, 08, 748 ಚ. ಕೀಮಿ ಕಳೆದುಕೊಂಡಿದ್ದೆವೆ, ಆದರೆ ಅದನ್ನು ಪಡೆದೇ ತೀರುತ್ತೇವೆಂದು ಅರಚಾಡುವ ನಮ್ಮ ನಾಯಕರು ಇಲ್ಲಿಯ ವರೆಗು ವಶ ಪಡಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿಲ್ಲ. ಚೀನಾ ಆಕ್ರಮಿಸಿಕೊಂಡಿರುವ ನಮ್ಮ ಲಡಾಖ್ ಪ್ರದೇಶದಿಂದ 19ಕೀಮಿ ಒಳಗೆ ಬಂದು ನಮ್ಮದೆ ಜಾಗದಲ್ಲಿ 5ಕೀಮಿ ರಸ್ತೆಯನ್ನು ಮಾಡಿದರೂ ನಮ್ಮ ಘನ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಪಾಕಿಸ್ತಾನವಂತು ವಿಶ್ವಸಂಸ್ಥೆಯ ಯಾವ ಕಾನೂನಿಗು ಬೆಲೆ ಕೊಟ್ಟಿಲ್ಲ. ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ನಾವು ನಮ್ಮ ವ್ಯಾಪಾರ, ರಕ್ಷಣ ದೃಷ್ಟಿಯಿಂದ ಬಹು ಆಯಾಕಟ್ಟಿನ ಪ್ರದೇಶವಾಗಿದ್ದ ಗಿಲ್ಗೀಟ್ & ಬಲೂಚಿಸ್ಥಾನವನ್ನ ಕಳೆದು ಕೊಳ್ಳುವ ಭಯ ಎದುರಾಗಿದೆ. ಇದೇ ಪ್ರದೇಶವನ್ನು ಭ್ರಿಟಿಷ್ ಸರ್ಕಾರ 60 ವರ್ಷಗಳ ಕಾಲ ವ್ಯಾಪಾರ ದೃಷ್ಟಿಯಿಂದ ಮಹರಾಜ ಹರಿಸಿಂಗರಿಂದ ಗುತ್ತಿಗೆ ಪಡೆದಿತ್ತು. ಅದೀಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ . ಗಿಲ್ಗೀಟ್ & ಬಲೂಚಿಸ್ಥಾನ ಹೆಚ್ಚು ಕಡಿಮೆ ಅಫ್ಘಾನಿಸ್ಥಾನ, ತಜಕಿಸ್ಥಾನ, ಚೀನಾ, ಟಿಬೆಟ್, ಪಾಕಿಸ್ಥಾನದ ಗಡಿ ಹಂಚಿಕೊಳ್ಳುವುದರ ಜೊತೆಗೆ ಏಷ್ಯಾ ರಾಷ್ಟ್ರಗಳ ಜೊತೆ ವ್ಯವಹರಿಸಲು ಇರುವ ಏಕೈಕ ಭೂಮಾರ್ಗ. ಆದ್ದರಿಂದಲೇ ವಿಶ್ವ ಸಂಸ್ಥೆಯನ್ನು ಮುಂದಿಟ್ಟುಕೊಂಡು ಆಮೇರಿಕಾ ಪಾಕಿಸ್ಥಾನವನ್ನು ಎತ್ತಿ ಕಟ್ಟುತ್ತಿದೆ. ಏಕೆಂದರೆ ಆಮೇರಿಕಾಕ್ಕು ಅದೇ ಪ್ರದೇಶ ಬೇಕು. ಚೀನಾ ಈಗಾಗಲೆ 11ಸಾವಿರ ಸೈನ್ಯವನ್ನ ನಿಯೋಜಿಸಿದೆ. ರಷ್ಯಾವಂತು ಚೀನಾವನ್ನು ಹದ್ದು ಬಸ್ತಿನಲ್ಲಿಡಲು ಇದೇ ಪ್ರದೇಶಕ್ಕೆ ಕಣ್ಣು ಇಟ್ಟಿತ್ತು. ಇಗ್ಲೆಂಡ್ ತನ್ನ ರಾಷ್ಟ್ರಕ್ಕೆ ಇಲ್ಲಿಂದ ಬಸ್ ಯಾನವನ್ನ ಆರಂಬಿಸಿದೆ. ಇದನ್ನು ನೋಡಿದರೆ ಆಂಗ್ಲರು ಭಾರತದ ವಿಭಜನೆ ಸಮಯದಲ್ಲಿ ಏಕೆ ಆಟವಾಡಿದರೆಂದು ಆರ್ಥವಾಗುತ್ತಿದೆ. ಏನೇ ಆಗಲಿ, ಈಗಾಗಲೆ ಕಾಶ್ಮಿರದ ವಿಚಾರದಲ್ಲಿ ಕನಿಷ್ಟ ಎಂದರು 20 ಸಾವಿರ ಸೈನಿಕರನ್ನು ಕಳೆದು ಕೊಂಡಿದ್ದೆವೆ , 40ಸಾವಿರ ಪೋಲಿಸರನ್ನ ಕಳೆದು ಕೊಂಡಿದ್ದೆವೆ, 50ಸಾವಿರಕ್ಕೂ ಹೆಚ್ಚು ನಾಗರಿಕರು ಸತ್ತಿದ್ದಾರೆ. ಇದೆಲ್ಲದಕ್ಕೂ ನಾವು ಉತ್ತರ ಹುಡುಕುವ ಅಗತ್ಯತೆಯೊಂದಿಗೆ ದೇಶ ಭಕ್ತ ರಾಜಕಾರಣಿಗಳನ್ನು ದಿಲ್ಲಿ ಗದ್ದುಗೆಯತ್ತ ಕಳಿಸುವ ಆಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿಯೇ ಇದೆ. ಆದರೆ ದಿಲ್ಲಿ ಗದ್ದುಗೆಯಲ್ಲಿ ಸಮರ್ಥ ನಾಯಕತ್ವದ 272 ಸಂಖ್ಯೆ ದಾಟಿದ ಬಹುಮತದ ಸರ್ಕಾರ ಬಂದು, ನಾವು ಆರ್ಥಿಕವಾಗಿ ಬಲಾಡ್ಯರಾದಗ ಮಾತ್ರ ಇದು ಸಾದ್ಯವಾಗಬಹುದು.







Leave a Reply