ಶೋಷಿತರ ಪರವಾಗಿ ದ್ವನಿ ನಾವು ಮಾತ್ರ ಎಂದರು ಆದರೆ ದಲಿತರನ್ನ ಹಾಡು ಹಗಲು ಕೊಚ್ಚಿದರು, ಮಹಿಳಾ ಸಶಕ್ತಿಕರಣವೆ ನಮ್ಮ ಧ್ಯೇಯ ಎನ್ನುತ್ತಲೆ ಮಹಿಳೆಯರ ಕೈ ಕಡಿದರು, ಸಾರ್ವಜನಿಕವಾಗಿ ಮೃಗಗಳಂತೆ ಎರಗಿ ಸೀರೆ ಹರಿದು ಬಡಿದರು.ಜೀವಪರ, ಮಾನವೀಯತೆ ಪರ ಎನ್ನುವ ಮಂದಿಯೆ ಕೊಂದಿದ್ದು ಬರೋಬ್ಬರಿ 283 ಜೀವಾತ್ಮಗಳನ್ನ!. ಇನ್ನೂ ಇವರ ಕುಡುಗೋಲು ಸುತ್ತಿಗೆಯ ವಿಕೃತಿಯ ಅಬ್ಬರಕ್ಕೆ ಬದುಕಿದ್ದು ಸತ್ತಂತೆ ಇರುವವರು ಸಾವಿರಾರು ಮಂದಿ. ಸರ್ವೇ ಭವಂತು ಸುಖಿನಃ, ವಸುದೈವ ಕುಟುಂಬಕಂ ಮಂತ್ರ ಹೇಳುವ ಭಾರತೀಯನನ್ನು ಹಿಂಸೆ ಮಾಡಿ ತನ್ನವರನ್ನೆ ವಿಕೃತವಾಗಿ ಕೊಲ್ಲವಷ್ಟರ ಮಟ್ಟಿಗೆ ಮಾನಸಿಕತೆ ಹುಟ್ಟು ಹಾಕಿದ ಕೀರ್ತಿ ಕಮ್ಯುನಿಸಂಗೆ ಸಲ್ಲಬೇಕು. ಜಿಹಾದಿ ಭಯೋತ್ಪಾದನಾ ಮನಸ್ಥಿತಿಗೂ, ಕಮ್ಯುನಿಸಂ ಗೂ ಅಂತಹ ವ್ಯತ್ಯಾಸ ಏನು ಇಲ್ಲ . ನನ್ನನ್ನು ಪಾಲಿಸದಿದ್ದರೆ ಹೊಡಿ ಕೊನೆಗೂ ಕೇಳದಿದ್ದರೆ ಕೊಲ್ಲು ಎನ್ನುವುದೆ ಇವೆರಡರ ಮೂಲ ತತ್ವ. ದುರಾದೃಷ್ಟ ಎಂದರೆ ಇವೆರಡರ ಬಂಧನದಲ್ಲಿ ದೇವರನಾಡು ಕೇರಳ ಇಂದು ಸಿಕ್ಕಿ ನಲುಗುತ್ತಿದೆ, ನರಳುತ್ತಿದೆ, ಹಂತ ಹಂತವಾಗಿ ಸ್ಮಶಾಣವಾಗಿ ಬದಲಾಗುತ್ತಿದೆ. ಕಮ್ಯುನಿಸ್ಟರ ಹಾಗು ಜಿಹಾದಿಗಳ ಕ್ರೂರತೆಗೆ ಕೇರಳ ಅಕ್ಷರಶಹ ಬಲಿಯಾಗಿ ಹೋಗಿದೆ. ಇನ್ನೂ ಇಲ್ಲಿ ಇವರ ಸರ್ವಾಧಿಕಾರಿ, ರಾಷ್ಟ್ರವಿರೋಧಿ ನಿಲುವುಗಳನ್ನು ವಿರೋಧಿಸುವ ರಾಷ್ಟ್ರೀಯವಾದಿಗಳ ಬದುಕಂತೂ ದಿನನಿತ್ಯ ಸಾವಿನ ಜೊತೆಯೆ ಸಂಘರ್ಷ ಮಾಡುವಂತಿದೆ. ಕಮ್ಯುನಿಸಂ ಹಾಗು ಜಿಹಾದಿಗಳಿಗೆ ಇಲ್ಲಿಯವರೆಗೆ ಬಲಿಯಾದ ಒಟ್ಟು ರಾಷ್ಟ್ರೀಯವಾದಿಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಇನ್ನೂ ದಿನನಿತ್ಯ ಹಲ್ಲೆಗಳಂತೂ ಮಾಮೂಲಿಯಾಗಿದೆ ಒಟ್ಟಾರೆ ರಾಕ್ಷಸಿ ಪ್ರವೃತ್ತಿಯ ಸರ್ವಾಧಿಕಾರಿ ಧೋರಣೆಗೆ ಕೇರಳ ಅಕ್ಷರಶಹ ಕುದ್ದುಹೋಗಿದೆ. ಕೇರಳ ತನ್ನ ಉಳಿವಿಗೆ ಒಂದು ಹೋರಾಟವನ್ನು ಸದಾ ಬಯಸುತಿತ್ತು, ಆ ಬಯಕೆಯನ್ನು ಇಂದು ಜನರಕ್ಷಾಯಾತ್ರೆ ಎಂಬ ರಾಷ್ಟ್ರೀಯವಾದಿಗಳ ಹುಂಕಾರ ತುಂಬಿದೆ ಎಂದು ಭಾವಿಸುತ್ತೇನೆ. ಜನರಕ್ಷಾಯಾತ್ರೆಯಾತ್ರೆ ಶುರುವಾದಾಗ ಕಮ್ಯುನಿಷ್ಟರು ಇದನ್ನು ಕರೆದಿದ್ದು ಇದು ಬಿಜೆಪಿಯ ಕೊನೆಯ ಶವಯಾತ್ರೆ ಎಂದು!!!. ಹೌದು ಅವರು ಹೀಗೆ ಕರೆಯಲು ಕಾರಣವೂ ಇತ್ತು, ಹರತಾಳಗಳ ರಾಜ್ಯ ಕೇರಳದಲ್ಲಿ ಬಿಜೆಪಿಯ ಸಾಲು ಸಾಲು ಕಾರ್ಯಕರ್ತರ ಹತ್ಯೆಯಾದಾಗ ದಿಕ್ಕು ತೋಚದೆ ಹರತಾಳಕ್ಕೆ ಕರೆ ಕೊಟ್ಟಾಗ ಬಿಜೆಪಿ ಬಲವಾಗಿದ್ದ ಕ್ಷೇತ್ರಗಳಲ್ಲೂ ಹರತಾಳ ಯಶಸ್ವಿಯಾಗುತ್ತಿರಲಿಲ್ಲ, ಕಮ್ಯುನಿಷ್ಟರ ಪಾರುಪತ್ಯವಿರುವ ಕ್ಷೇತ್ರಗಳಲ್ಲಿ ಬೇಕಾದರೆ ಅಂದು ಒಬ್ಬ ಬಿಜೆಪಿ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಹಲ್ಲೆಗೊಳಗಾಗುತಿದ್ದ ಅಥವಾ ಕೊಲೆಯಾಗುತಿದ್ದ ಹೊರತು ಒಂದು ಗೂಡಂಗಡಿಯು ಮುಚ್ಚುತ್ತಿರಲಿಲ್ಲ. ಇಂತಹ ಸರ್ವಾಧಿಕಾರಿ ದಿನಗಳಲ್ಲಿ ಕಾಲ ತಳ್ಳುತ್ತಿರುವ ಕಮ್ಯುನಿಸ್ಟರಿಗೆ ಜನರಕ್ಷಾಯಾತ್ರೆ ಖಂಡಿತವಾಗಿ ಗೆಲ್ಲುವುದಿಲ್ಲ ಎನ್ನುವ ಬಾರಿ ದೊಡ್ಡ ನಂಬಿಕೆ ಇತ್ತು ಹಾಗಾಗಿಯೆ ಕಮ್ಯುನಿಷ್ಟ್ ಸಾಮಾನ್ಯ ಕಾರ್ಯಕರ್ತನು ಜನರಕ್ಷಾಯಾತ್ರೆಯನ್ನು ಶವಯಾತ್ರೆ ಎಂದು ಮೂದಲಿಸಿ ಗಹಗಹಿಸಿ ನಗುತಿದ್ದ. ಆದರೆ ಯಾವಾಗ ಜನರಕ್ಷಾಯಾತ್ರೆ ಕಮ್ಯುನಿಷ್ಟರ ಭದ್ರ ಕೋಟೆ ಕಣ್ಣೂರಿನಲ್ಲಿಯೆ ಜನಸಾಗರದಿಂದ ತುಂಬಿ ಪೌರುಷಯಾತ್ರೆಯಾಯಿತೊ ಕಮ್ಯುನಿಷ್ಟರ ನೆಮ್ಮದಿಗೆ ಬೆಂಕಿ ಬಿದ್ದಿತ್ತು. ಇದ್ದಕ್ಕಿಂದ್ದಂತೆ ಬಿಜೆಪಿ ಕಣ್ಣೂರಿನ ಕಚೇರಿಯಲ್ಲಿ ನಾಡಬಾಂಬ್ ಸಿಕ್ಕಿದವು ಎನ್ನುವ ಸುಳ್ಳುಸುದ್ದಿಯನ್ನು ಹರಿಯಬಿಡಲಾಯಿತು, ಅಮಿತ್ ಷಾ ಜನರಕ್ಷಾಯಾತ್ರೆಗೆ ಚಾಲನೆ ಕೊಟ್ಟು ಯಾತ್ರೆಯಲ್ಲಿ ಭಾಗವಹಿಸಿ ದೆಹಲಿಗೆ ತುರ್ತು ಕೆಲಸಕ್ಕೆ ಮರಳಿದಕ್ಕೆ ಹೆದರಿಹೋದರು ಎನ್ನುವ ಗುಲ್ಲೆಬ್ಬಿಸಲಾಯಿತು, ಇದ್ಯಾವುದು ಜನರಕ್ಷಾಯಾತ್ರೆಯ ಶಕ್ತಿಯನ್ನು ಕ್ಷೀಣಿಸುವಂತೆ ಮಾಡದಿದ್ದಾಗ ಯಾತ್ರೆಗೆ ಬರದಂತೆ ಜನರನ್ನು ಹೆದರಿಸಲು ಕಣ್ಣೂರಿನ ಮುಜಿಪಿಳ್ಳಂಗಡ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯವಾಹ ನಿಧೀಶ್ ನ ಮೇಲೆ ೧೦ಕ್ಕೂ ಹೆಚ್ಚು ಕಮ್ಯುನಿಷ್ಟ್ ಗುಂಡಾಗಳು ಎರಗಿ ಮನಸ್ಸೋ ಇಚ್ಛೆ ಕೊಚ್ಚಿದರು. ವಾರಕ್ಕೊಂದು ಮಾರಣಾಂತಿಕ ಹಲ್ಲೆ, ತಿಂಗಳಿಗೊಂದು ಬಲಿಧಾನ ನೋಡಿ ನೋಡಿ ಕೇರಳದ ರಾಷ್ಟ್ರೀಯವಾದಿಗಳ ಮನಸ್ಸು ರೋಸಿಹೋಗಿದೆ, ಬದುಕುವ ಆಸೆಯನ್ನೆ ಬಿಟ್ಟು ರಾಷ್ಟ್ರಕ್ಕಾಗಿ ದುಡಿಯುತ್ತಿರುವ ಇಂತಹ ಕಾರ್ಯಕರ್ತರು ಅವುಡುಗಚ್ಚಿ ಇನ್ನು ಹೆಚ್ಚಿನ ಸಮಯ ಯಾತ್ರೆಯ ಗೆಲುವಿಗೆ ಸಮರ್ಪಿಸಿದರೆ ಹೊರತು ಬೆದರಿ ಒಡಲಿಲ್ಲ . ಇಡಿಯ ಜನರಕ್ಷಾಯಾತ್ರೆಯನ್ನು ಯಾತ್ರೆಯ ಒಳಗಿದ್ದೆ ಗಮನಿಸಿದರೆ ಈ ಯಾತ್ರೆ ಹೇಗೆ ಕೇರಳದ ಜನಮಾನಸಕ್ಕೆ ತಲುಪಿದೆ, ಕೆಂಪು ರಕ್ಕಸರ ಮದ್ಯೆ ಗೆದ್ದಿದ್ದು ಹೇಗೆ ಎನ್ನುವುದು ತಿಳಿಯುತ್ತದೆ. ಜನರಕ್ಷಾಯಾತ್ರೆಯನ್ನು ಒಮ್ಮೊಮ್ಮೆ ದೇಶಭಕ್ತರ ಯಾತ್ರೆಯಂತೆ, ಆಕ್ರೋಶದ ಯಾತ್ರೆಯಂತೆ, ಸಂತ್ರಸ್ತರ ಯಾತ್ರೆಯಂತೆ, ರಾಷ್ಟ್ರೀಯತೆಯ ಹುಂಕಾರದಂತೆ ಕಾಣುತಿತ್ತು. ಏಕೆಂದರೆ ಯಾತ್ರೆಯಲ್ಲಿದ್ದ ಪ್ರತಿ ಕಾರ್ಯಕರ್ತನ ಹಿಂದೆ ಕಮ್ಯುನಿಷ್ಟರೊಟ್ಟಿಗಿನ ಅಥವಾ ಜಿಹಾದಿಗಳೊಟ್ಟಿಗಿನ ನಡುವೆ ನಡೆದ ಒಂದು ಬಹು ದೊಡ್ಡ ಸಂಘರ್ಷದ ಕತೆ ಇದೆ. ಇಂದು ಯಾತ್ರೆಯಲ್ಲಿ ಭಾಗವಹಿಸಿದಕ್ಕೆ ನಾಳೆ ಆತನ ಮನೆಗೆ ಸರ್ಕಾರಿ ಸೌಲಭ್ಯಗಳೆ ಕಡಿತವಾಗಬಹುದು, ಬಹಿಷ್ಕಾರ ಬೀಳಬಹುದು, ಮನೆಗೆ ಬಾಂಬ್ ದಾಳಿಯಾಗಬಹುದು ಕೊನೆಗೆ ಕೊಲೆಯಾದರು ಆಗಬಹುದು ಇಲ್ಲಿ ಯಾವುದನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಪ್ಪಿ ತಪ್ಪಿ ಯಾತ್ರೆಯಲ್ಲಿ ಭಾಗವಹಿಸುವವ ಕಮ್ಯುನಿಸ್ಟರ ಸರ್ವಾಧಿಕಾರಿ ” ಪಾರ್ಟಿ ಗ್ರಾಮಂ” ನವನಾಗಿದ್ದರೆ ಅವನ ಬದುಕು ಸಾವಿನ ತೂಗುಗತ್ತಿಯ ಮೇಲೆ ನಡೆದಂತೆಯೆ ಎನ್ನಬಹುದು. ಪಾರ್ಟಿ ಗ್ರಾಮಗಳು ಕಮ್ಯುನಿಸ್ಟರಲ್ಲದವರಿಗೆ ಸ್ಮಶಾನವಿದ್ದಂತೆ. ಕೇರಳದಲ್ಲಿ ಅತಿಹೆಚ್ಚು ರಾಷ್ಟ್ರೀಯವಾದಿಗಳ ಕೊಲೆ ಮತ್ತು ಮಾರಣಾಂತಿಕ ಹಲ್ಲೆಗಳಾಗಿರುವುದು ಪಾರ್ಟಿ ಗ್ರಾಮಗಳಲ್ಲಿಯೇ. ಪಾರ್ಟಿ ಗ್ರಾಮದ ಹೆಬ್ಬಾಗಿಲಿಗೆ ಇದು ಕಮ್ಯುನಿಷ್ಟರ ಹಳ್ಳಿ ಇಲ್ಲಿ ಅನ್ಯರು ಬರಬಾರದು ಎನ್ನುವ ಸರ್ವಾಧಿಕಾರಿ ಫರ್ಮಾನುಗಳಿರುವ ಸೂಚನ ಫಲಕಗಳನ್ನ ನೆಟ್ಟಿರಲಾಗುತ್ತಿದೆ, ಜೊತೆಗೆ ಎರಡು ರಸ್ತೆಗಳ ಅಂಗುಲಗಳಲ್ಲಿ ಎರಡು ಅಂಗಡಿಗಳಿರುತ್ತವೆ. ಅಂಗಡಿಯೊಳಗಿರುವ ಕಣ್ಣುಗಳಿಗೆ ಯಾರು ಗ್ರಾಮಕ್ಕೆ ಬರುತ್ತಾರೆ ಹೋಗುತ್ತಾರೆ ಎಂದು ಕಾಯುವುದೆ ಕೆಲಸ, ಕಾರೊಂದು ಗ್ರಾಮದೊಳಗೆ ಬಂದರೆ ಅದನ್ನು ಹಿಂಬಾಲಿಸಿ ಅದರ ಸಂಪೂರ್ಣ ವಿವರ ತೆಗೆದು, ಅಪ್ಪಿ ತಪ್ಪಿ ಅದು ಆರೆಸೆಸ್ಸಿಗನ ಅಥವಾ ಬಿಜೆಪಿಯವನ ಕಾರಾಗಿದ್ದರೆ ಅದು ಬಾಂಬ್ ದಾಳಿಗೆ ಒಳಗಾದರೆ ಅಚ್ಚರಿ ಪಡುವ ಸಂಗತಿಯೇನಲ್ಲ. ಪಾರ್ಟಿ ಗ್ರಾಮಂನಲ್ಲಿರುವ ಪ್ರತಿ ಸಂಘದ ಅಥವಾ ಭಾಜಪ ಕಾರ್ಯಕರ್ತ ಮನೆಯ ಜಗುಲಿಯ ಅಥವಾ ಮುಂಬಾಗಿಲಿಗೆ ಹತ್ತಿರವಿರುವ ಕೋಣೆಗಳಲ್ಲಿ ಇರುವುದೆ ಇಲ್ಲ ಏಕೆಂದರೆ ಎಲ್ಲಿ ಬಾಂಬ್ ಹಾಕುತ್ತಾರೊ ಎನ್ನುವ ಭಯ. ಕನಿಷ್ಟ ನಾಲ್ಕೈದು ಬಾರಿಯಾದರೂ ಪ್ರತಿ ಸಂಘದ ಮನೆಗೆ ಬಾಂಬ್ ದಾಳಿ ಆಗಿದೆ ಎಂದರೆ ರಾಷ್ಟ್ರೀಯವಾದಿಗಳ ಬದುಕು ಅದೇಷ್ಟು ನರಕವಿರಬೇಕು ಅಲ್ಲವೆ. ಇನ್ನು ಪಾರ್ಟಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಪಾರ್ಟಿ ಕೋರ್ಟ್ ಗಳಂತು ಸಂಘದ ಕಾರ್ಯಕರ್ತರ ಕೊಲೆ ಮಾಡಲು ನಿರ್ಧರಿಸುವ ರಾಕ್ಷಸಕುಲಗಳೇ ಸಮ್ಮಿಲನದ ಕೇಂದ್ರವಿದ್ದಂತೆ , ಭಯೋತ್ಪಾದಕ ಅಡ್ಡೆಗಳಿದ್ದಂತೆ , ಪ್ರತಿ ಸಂಘದ ಕಾರ್ಯಕರ್ತನ ಹತ್ಯೆಯ ಮುಂಚೆ ಹತ್ಯೆ ಮಾಡಲು ನಿರ್ಧಾರವಾಗುವುದು ಕಣ್ಣಿಗೆ ಕಾಣಿಸದ ಈ ಪಾರ್ಟಿ ಕೋರ್ಟ್ ಗಳಲ್ಲೇ. ಇಂತಹ ನರಕ ಸದೃಷ ಬದುಕಿನಲ್ಲಿಯೂ ರಾಷ್ಟ್ರಕ್ಕಾಗಿ ದುಡಿಯುವುದಕ್ಕೆ ಹಂಬಲಿಸುತ್ತಾನಲ್ಲ ಹಾಗಾಗಿಯೆ ಕೇರಳದ ಕಾರ್ಯಕರ್ತ ನಮ್ಮ ಮನದಲ್ಲಿ ಒಂದು ಹೆಜ್ಜೆ ಮೇಲೆ ನಿಲ್ಲುತ್ತಾನೆ. ಜನರಕ್ಷಾಯಾತ್ರೆಯ ಪ್ರತಿ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸುತ್ತಾ ಹೋದಂತೆ ಕಾರ್ಯಕರ್ತನ ಪರಿಪಕ್ವತೆ ಎದ್ದು ಕಾಣುತ್ತದೆ. ಜನರಕ್ಷಾಯಾತ್ರೆ ಗೆದ್ದಿದೇಕೆ ಎಂದು ಕೇಳಿದರೆ ಮುಲಾಜಿಲ್ಲದೆ ಇದು ಕಾರ್ಯಕರ್ತನ ಅರ್ಪಣ ಮನಸ್ಥಿತಿಯಿಂದ ಗೆದ್ದದ್ದು ಎಂದು ಹೇಳಬಹುದು. ಬಹುತೇಕ ಯಾತ್ರೆಗೆ ಬರುವಾಗ ತನ್ನ ಮನೆಯಿಂದ ಪ್ರತಿ ಕಾರ್ಯಕರ್ತ ದ್ವಜ ತರುತ್ತಿದ್ದದನ್ನು ಕಂಡ ನನಗೆ ಖಂಡಿತವಾಗಿ ಆಶ್ಚರ್ಯ ಎನಿಸುತಿತ್ತು, ಆಶ್ಚರ್ಯ ದ್ವಜ ತಂದ ಕಾರಣಕ್ಕಲ್ಲ ಆ ಧ್ವಜಕ್ಕೆ ಕನಿಷ್ಟ ಒಂದೈದು ವರ್ಷ ದಾಟಿತ್ತು. ದ್ವಜವನ್ನು ಇಸ್ತ್ರಿಮಾಡಿದರು ಮಡಚಿದ ಒಂದಿಷ್ಟು ಗೆರೆಗಳು ಇದು ಕಾಪಾಡಿಟ್ಟ ದ್ವಜ ಎನ್ನುತಿದ್ದವಲ್ಲ ಆ ಕಾರಣಕ್ಕೆ. ಇನ್ನು ದ್ವಜಕ್ಕೆ ತೊಡಿಸಲು ತಂದ ದಂಡ ಯಾವುದೋ ಒಳ್ಳೆಯ ಮರದ ನೇರವಾದ ಕೋಲನ್ನು ಕಡಿದು, ಅದರ ಸಿಪ್ಪೆಯನ್ನು ತೆಗೆದು ಯಾವುದೊ ದೈವಕಾರ್ಯಕ್ಕೆ ಪಂಜಿಗೆ ಸಿದ್ಧಪಡಿಸಿದಂತೆ ಇತ್ತಲ್ಲ ಅದು ಎಂತವನನ್ನು ಕಣ್ಣರಳಿಸುತ್ತೆ. ಆ ದ್ವಜ ದಂಡದ ಕೊನೆಯ ತುದಿಗಳ ಅಂಚುಗಳಲ್ಲಿನ ನುಣ್ಣನೆಯ ಚಿತ್ತಾರ ಕಾರ್ಯಕರ್ತನ ಬದ್ಧತೆಗಳನ್ನು ಎತ್ತಿ ಹಿಡಿಯುತಿತ್ತು. ಇದು ಸಣ್ಣ ವಿಚಾರವೆನಿಸಬಹುದು ಆದರೆ ಇಷ್ಟು ಪರಿಶುಭ್ರವಾಗಿ ದಂಡ ಹಾಗು ದ್ವಜ ಸಿದ್ಧಪಡಿಸಲು ಕನಿಷ್ಠ ಒಂದು ದಿನ ಬೇಕೆ ಬೇಕು, ಕೇವಲ ದ್ವಜ ದಂಡ ಎನ್ನುವುದಕ್ಕಿಂತ ಅದರ ಹಿಂದಿನ ದೈವ ಶ್ರದ್ದೆ ಇದೆಯಲ್ಲ ಅದನ್ನು ಸರಿಯಾಗಿ ಗಮನಿಸಿದರೆ ಜನುಮಕ್ಕಾಗುವಷ್ಟು ಪ್ರೇರಣೆ ದಕ್ಕಿ ಬಿಡುತ್ತದೆ. ಪ್ರತಿ ದಿನ ಬೆಳಗ್ಗೆ ೧೧ ರಿಂದ ೧ ಗಂಟೆ ಮಧ್ಯಾಹ್ನದ ಒಳಗೆ ಒಂದು ಸಾರ್ವಜನಿಕ ಕಾರ್ಯಕ್ರಮ ಬಿಟ್ಟರೆ ಬಹುತೇಕ ಸಂಜೆ ೪ ಕ್ಕೆ ಯಾತ್ರೆ ಶುರುವಾಗುತ್ತಿದ್ದದ್ದು ಆದರೆ ಯಾತ್ರೆ ಮುಗಿಯುತಿದ್ದದ್ದು ೧೦ ರಿಂದ ೧೫ ಕಿಲೋಮೀಟರ್ ನಡೆದು ಸಾರ್ವಜನಿಕ ಸಮಾರಂಭ ಎಂಟರ ರಾತ್ರಿಗೆ ಮುಗಿದ ಮೇಲೆಯೇ. ಆದರೆ ಯಾವುದೆ ಬಸ್ ಸೌಲಭ್ಯ ಇಲ್ಲದಿದ್ದರೂ ನಡೆಯಬೇಕು ಇನ್ನು ಬಸ್ಸು ಸಿಕ್ಕಿದರು ತನ್ನೂರಿಗೆ ಅಲ್ಲಿಂದ ೧೦ ಕಿಮೀ ನಡೆದೆ ಹೋಗಬೇಕಾದ ಪರಿಸ್ಥಿತಿಯಲ್ಲೂ ಕಾರ್ಯಕ್ರಮಕ್ಕೆ ಬರುತಿದ್ದರಲ್ಲ ಆ ಕಾರ್ಯಕರ್ತರ ಮಾನಸಿಕತೆ ಎಂತದ್ದಿರಬೇಕು ಅಲ್ಲವೇ. ಮನೆಯಿಂದಲೆ ಊಟಮಾಡಿ, ಕೈಯಲ್ಲಿ ಸಣ್ಣ ಟಾರ್ಚ್ ಹಿಡಿದು, ತನ್ನ ಮಕ್ಕಳನ್ನು ಸಹ ಹೆಗಲಲ್ಲಿ ಹೊತ್ತು, ಜೊತೆಗೆ ಹೆಮ್ಮೆಯಿಂದ ದ್ವಜವನ್ನು ಹೊತ್ತು ತಾಯಿ ಭಾರತಿಗೆ ಜೈಕಾರ ಕೂಗುತ್ತ ಬರುವ ಕಾರ್ಯಕರ್ತನ ಕಮಿಟ್ ಮೆಂಟ್ ಈ ಯಾತ್ರೆಯನ್ನು ಗೆಲ್ಲಿಸಿದ್ದು ಎಂದರೆ ತಪ್ಪಾಗಲಾರದು. ಇನ್ನು ಯಾತ್ರೆಯಲ್ಲಿ ಹೆಚ್ಚಾಗಿ ಕಾಣುತ್ತಿದ್ದದ್ದು ಶೆ. 50ರಷ್ಟು ಮಹಿಳೆಯರು, ಇನ್ನು ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಶೆ. 60ರಷ್ಟು ಯುವ ಸಮೂಹದ ಜೇಂಕಾರ ಇದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಕಮ್ಯುನಿಸಂ ಅಂತ್ಯ ಕಾಣುವುದು ನಿಶ್ಚಿತ ಎನ್ನಬಹುದು. ಯಾತ್ರೆಯಲ್ಲಿದ್ದ ಒಬ್ಬ ಪ್ರವೀಣ್ ಎನ್ನುವ ಕಾರ್ಯಕರ್ತನ ಮೇಲೆ ನಾಲ್ಕು ಬಾರಿ ಹಲ್ಲೆಯಾಗಿ ಐದನೆ ಬಾರಿಗೆ ಆತನ ಕಾಲುಗಳನ್ನು ಮುರಿದು ಸಮುದ್ರದ ದಡಕ್ಕೆ ಎಸೆದಿದ್ದರು ಈ ದುರುಳ ಕಮ್ಯುನಿಷ್ಟರು. ಅವರ ಕತೆಯನ್ನು ಕೇಳುತ್ತಲೆ ಹೆಜ್ಜೆ ಹಾಕುವಾಗ ಆಗಾಗ ಅವರು ಮತ್ತು ಅವರ ಸ್ನೇಹಿತರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಪರಿಚಯಸ್ಥರಿಗೆ ಹೆಮ್ಮೆಯಿಂದ ಕೈ ಎತ್ತಿ ಬೀಸುತಿದ್ದರು ಅದು ಹೊಸದೇನಲ್ಲ ಎಂದನಿಸುತ್ತಿದ್ದ ನನಗೆ ಆಗಾಗ ಅವರ ಗೆಳೆಯ ವೃಂದದವರೆ ಒಬ್ಬರನೊಬ್ಬರು ನೋಡಿ ನಗುತಿದ್ದದ್ದು ನೋಡಿ ಯಾಕಿಂಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಮೂಡುತಿತ್ತು. ಆಗ ಪ್ರವೀಣ್ ನನಗೆ ಹೇಳುತ್ತಾ ಯಾಕೆ ಖುಷಿಯಿಂದ ನಗುತಿದ್ದೇವೆ ಗೊತ್ತೆ ಅರುಣ್ ಎಂದವರೆ, ನಾವು ಇಷ್ಟು ವರ್ಷಗಳ ಕಾಲ ಕಮ್ಯುನಿಷ್ಟರೊಂದಿಗೆ ಗುದ್ದಾಡಿದ್ದೇವೆ, ಸಂಘರ್ಷ ಮಾಡಿದ್ದೇವೆ ಆದರೆ ಎಂದೂ ನಮಗೆ ಭಯವಿರುತ್ತಿರಲಿಲ್ಲ, ಆದರೆ ನಿಮ್ಮೊಂದಿಗೆ ಜನರಿಲ್ಲ ಎಂದಾಗ ಅತೀವ ನೋವಾಗುತಿತ್ತು ಆದರೆ ಇಂದು ನಮಗಾಗಿರುವ ಎಲ್ಲಾ ನೋವುಗಳು ಸತ್ತಿವೆ. ನಮಗೆ ಚುನಾವಣೆಯಲ್ಲಿ ಗೆಲ್ಲುವ ಕನಸಿಲ್ಲ ಆದರೆ ಕಣ್ಣು ತುಂಬುವಷ್ಟು ಜನರು ನಮ್ಮೊಂದಿಗಿದ್ದಾರಲ್ಲ ಅದೇ ನಮಗೆ ಸಾಕು. ಈ ದಿನಕ್ಕೆ ಅದೇಷ್ಟು ದಿನದಿಂದ ಪರಿತಪಿಸುತಿದ್ದೆವು, ಇಂದು ನಮ್ಮ ಕಾಲ ಬಂದಿದೆ ಆದಕ್ಕಾಗಿಯೆ ಕಮ್ಯುನಿಷ್ಟರನ್ನು ನೋಡಿ ನಗುತಿದ್ದೆವು ಇನ್ನು ಮುಂದೆ ಕೇರಳ ಬದಲಾಗುವುದನ್ನು ನಾನು ನೋಡಿಯೆ ನೋಡುತ್ತೆನೆ ಎಂದು ಭಾವುಕರಾದರು. ಇವರನ್ನೆಲ್ಲ ನೋಡಿದಾಗ ಅಬ್ಬಾ! ಇದೆಂತಹ ತ್ಯಾಗ ಮನಸ್ಥಿತಿ ಎಂದೆನಿಸದಿರದು. ಕೇರಳದ ಕಾರ್ಯಕರ್ತರ ಈ ಮಾನಸಿಕತೆಯನ್ನು ನೋಡಿದಾಗ ಇವರು ಬದುಕುವ ಅನಿವಾರ್ಯತೆಯ ಕಾರಣಕ್ಕೆ ಹೊಡೆದಾಡುತಿದ್ದಾರೆ ಎಂದುಕೊಂಡರೆ ಮಹಾಪ್ರಮಾದವಾದಿತು ಬದುಕುವುದೊಂದೆ ಜೀವನವಾದರೆ ಕಮ್ಯುನಿಷ್ಟರೊಟ್ಟಿಗೆ ಸೇರಿದರೆ ಸಾಕು ಸಮಸ್ಯೆ ಇರುವುದಿಲ್ಲ ಎಕೆಂದರೆ ಸೈಧ್ದಾಂತಿಕ ಬಿನ್ನತೆಗೆ ರಾಷ್ಟ್ರವಾದಿಗಳು ಯಾರನ್ನು ಕೊಂದಿಲ್ಲ ಹೊಡೆಡಿಲ್ಲ ಆದರೆ ಕಮ್ಯುನಿಷ್ಟ್ ಕೊಲೆಗಡುಕರ ಮುಂದೆ ರಾಷ್ಟ್ರಪುನರ್ ನಿರ್ಮಾಣಕ್ಕಾಗಿಯೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲೆ ಬೇಕಾಗಿರುವ ಅನಿವಾರ್ಯತೆಯಲ್ಲೂ ಇವರು ಹಿಂದೆ ಸರಿಯುವುದಿಲ್ಲವಲ್ಲ ಆ ಕಾರಣಕ್ಕೆ ಇವರು ನಮಗೆ ಹೆಮ್ಮೆ ಎನಿಸುವುದು. ರಾಜಕಾರಣವು ಇಂದು ಬ್ಯುಸಿನೆಸ್ ಮಾನಸಿಕತೆ ಹೊಂದಿರುವ ಸಂಧರ್ಭದಲ್ಲಿ, ಪ್ರಚಾರದ ಗಿಮಿಕ್ ಮಾಡಲು ಯಾವುದೊ ಮಾರ್ಕೆಟಿಂಗ್ ಕಂಪನಿಗಳಿಗೆ ಗುತ್ತಿಗೆ ಕೊಡುವ ಕಾಲಘಟ್ಟದಲ್ಲಿ, ಸಭೆಗಳಿಗೆ ಜನ ತುಂಬಿಸಿಲು ಹಣ ಹೆಂಡ ಹಂಚಿ ಸಮಾಜವನ್ನ ಕುಲಗೆಡಿಸುವಾಗ ಸುಧೀರ್ಘ ಹೋರಾಟವೊಂದನ್ನು ಶಕ್ತಿಯುತವಾಗಿ ಹೇಗೆ ಕಟ್ಟಬಹುದು ಎಂಬುದಕ್ಕೆ ಕೇರಳದ ಬಿಜೆಪಿ ಹಾಗು ಕಾರ್ಯಕರ್ತರು ನಮಗೆ ಮಾದರಿಯಾಗುತ್ತಾರೆ. ಮೊದಲನೆಯದಾಗಿ ಕೇರಳದ ಬಿಜೆಪಿಗೆ ತನ್ನ ಕಾರ್ಯಕರ್ತರು ಎಷ್ಟು ಜನ ಬಲಿಧಾನಗೈದಿದ್ದಾರೆ ಎಂದು ಗೊತ್ತಿದೆ, ಬಲಿಧಾನಗೈದ ಪ್ರತಿ ಕಾರ್ಯಕರ್ತನನ್ನು ಸದಾ ನೆನೆಯುತ್ತಾರೆ. ಯಾತ್ರೆಯುದ್ದಕ್ಕೂ ಬಲಿಧಾನವಾದ ಪ್ರತಿಕಾರ್ಯಕರ್ತನ ಮನೆಗೆ ಸ್ವತಃ ಕುಮ್ಮನಂ ರಾಜಶೇಖರನ್ ಭೇಟಿ ಕೊಟ್ಟಿದ್ದಾರೆ, ಅಮಿತ್ ಷಾ ಸೇರಿ ಹಲವು ರಾಷ್ಟ್ರೀಯ ನಾಯಕರು ಸಹ ಕುಮ್ಮನಂ ರಾಜಶೇಖರ್ ರವರಿಗೆ ಜೊತೆಯಾಗಿ ಕಾರ್ಯಕರ್ತರಿಗೆ ಸಾಂತ್ವನ ಹೇಳಿದ್ದಾರೆ. ಸಂಘಟನೆಯ ಮಮತೆಯ ಬಾಹುಗಳು ನೊಂದ ಕಾರ್ಯಕರ್ತರನ್ನು ತಬ್ಬಿ ಎಂದಿಗೂ ಜೊತೆಗಿರುವ ನಂಬಿಕೆ ಮೂಡಿಸಿದ್ದಾವೆ. ಇವೆಲ್ಲವುಗಳ ನಡುವೆ ಭಲಿದಾನಿಗಳಿಗೆ ಶ್ರದ್ಧಾಂಜಲಿ ನೀಡಲು ಮಾಡಿದ ಹಲವು ವೇದಿಕೆಗಳು ಕಣ್ಣು ಕಟ್ಟುವಂತಿದ್ದವು, ಪ್ರತಿಯೊಂದು ಕಡೆಯೂ ತೆಂಗಿನ ಗರಿಗಳನ್ನು ಬಳಸಿ ರಾತ್ರಿಯೆಲ್ಲಾ ಸುಂದರವಾಗಿ ನೇಯ್ದು ಚಪ್ಪರ ಹಾಕಿರುವುದು ನೋಡಿದರೆ ಕಾರ್ಯಕರ್ತರ ಬದ್ದತೆ ಎಂತದ್ದು ಎಂದು ತಿಳಿಯುತ್ತದೆ, ಬಲಿದಾನವಾದ ಕಾರ್ಯಕರ್ತರನ್ನು ಅವೆರೆಷ್ಟು ಪೂಜಿಸುತ್ತಾರೆ ಎಂದು ತಿಳಿಯುತ್ತದೆ, ಇನ್ನು ಅಲಂಕಾರಕ್ಕೆ ಕೆಸದ ದೊಡ್ಡ ಎಲೆಗಳನ್ನು (ಮಲೆನಾಡಿನ ಭಾಗದಲ್ಲಿ ದೊರೆಯುತ್ತದೆ) ಬಳಸಿರುವುದು, ಕೇವಲ ಬಣ್ಣದ ಬಟ್ಟೆ ಟೇಪ್ ಗಳನ್ನೆ ಬಳಸಿ ಮಾಡಿದ ಮಾಲೆಗಳು ಇವೆಲ್ಲವೂ ಅತ್ಯದ್ಭುತ. ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಯಾಕೆ ಪ್ರಸ್ತಾಪಿಸುತಿದ್ದೇನೆ ಎಂದರೆ ಇಂತಹ ಕೆಲಸ ಮಾಡಲು ದಿನಗಳಷ್ಟು ಸಮಯ ಬೇಕು, ತುಂಬಾ ಶ್ರದ್ಧೆ ಬೇಕು, ಅವೆಲ್ಲವು ಕೇರಳದ ಕಾರ್ಯಕರ್ತನಲ್ಲಿದೆ. ತುಂಬಾ ಸಣ್ಣ ಸಣ್ಣ ವಿಚಾರಗಳಲ್ಲಿಯೂ ಫರಫೆಕ್ಷನ್ ಇದ್ದರೆ ಮಾತ್ರ ತುಂಬಾ ದೊಡ್ಡ ಕೆಲಸಗಳು ಗಟ್ಟಿಯಾಗಿ, ವೈಭವಯುತವಾಗಿ ನಡೆಯುತ್ತದೆ ಎನ್ನುವುದಕ್ಕೆ ಕೇರಳದ ಕಾರ್ಯಕರ್ತರ ಅರ್ಪಣಾ ಮನಸ್ಥಿತಿ ಹಾಗು ಜನರಕ್ಷಾ ಯಾತ್ರೆಯ ಗೆಲುವೆ ಸಾಕ್ಷಿ. ಹೌದು ಕೊಂದವರ ಮದ್ಯೆ, ಹಂಗಿಸಿದವರ ಮದ್ಯೆ, ಹೊಡೆದವರ ಮದ್ಯೆ ಜನರಕ್ಷಾ ಯಾತ್ರೆ ಗೆದ್ದಿದ್ದೆ, ಯಾತ್ರೆ ಗೆಲ್ಲಲೇ ಬೇಕೆಂದು ಕರುನಾಡಿನ ಸಂಘಟಕರು ಕೇರಳ ಕಾರ್ಯಕರ್ತರ ಬೆನ್ನಿಗೆ ಟೊಂಕ ಕಟ್ಟಿ ನಿಂತು ದುಡಿದಿದ್ದಾರೆ, ಗೆಲ್ಲಿಸಿದ್ದಾರೆ. ಅಮಿತ್ ಷಾ ಕಮ್ಯುನಿಷ್ಟರ ಮುಖವಾಡ ಕಳಚುವ ಪ್ರತಿಜ್ಞೆ ಮಾಡಿ ರಣತಂತ್ರ ಹೂಡುತ್ತಾ ಒಂದರ ಮೇಲೊಂದು ಶಾಕ್ ನೀಡುತ್ತಿದ್ದಾರೆ . ಕುಮ್ಮನಂ ರಾಜಶೇಖರನ್ ತಮ್ಮ ೬೫ ನೇ ವಯಸ್ಸಿನಲ್ಲಿ ಕೇರಳದ ಕಾರ್ಯಕರ್ತರ ಮನೆಯ ಯಜಮಾನನಾಗಿ ಕಮ್ಯುನಿಸ್ಟರ ವಿರುದ್ಧ ಪ್ರತಿ ದಿನ ಪ್ರತಿ ಕ್ಷಣ ಬೀದಿಯಲ್ಲಿ ನಿಂತು ಗುದ್ದಾಡುತಿದ್ದಾರೆ. ಇಂದು ಯಾತ್ರೆಯಲ್ಲಿ ಪಾಲ್ಗೊಂಡರೆ ನಾಳೆಯ ನನ್ನ ದಿನಗಳು ಕತ್ತಲಾಗುತ್ತವೆ ಎಂದು ಗೊತ್ತಿದ್ದರೂ ಕೇರಳದ ಜನಸಮೂಹ ಯಾತ್ರೆಯಲ್ಲಿ ಹೆಜ್ಜೆಹಾಕಿ ಕೊಲೆ ರಾಜಕೀಯಕ್ಕೆ ದಿಕ್ಕಾರ ಕೂಗಿದೆ. ದುಡಿದ ಕಾರ್ಯಕರ್ತರ ಮನೋಧೈರ್ಯ ನುರ್ಮುಡಿ ಯಾಗಿದೆ. ನನ್ನೊಂದಿಗೆ ಅಸಂಖ್ಯಾತ ರಾಷ್ಟ್ರೀಯವಾದಿಗಳಿದ್ದಾರೆ ಸಾವು ಬಂದರೆ ಬರಲಿ ಎದುರಿಸಿ ನಾಡ ಕಟ್ಟುವೆ ಎಂದು ಭಗವದ್ವಜವನ್ನು ಹೆಗಲಲ್ಲೆರಿಸಿ ದುಡಿಯುವ ಕಾರ್ಯಕರ್ತನಿಗೆ ಗೆಲುವಾಗಲಿ ಇನ್ನಾದರೂ ಮುಂದಿನ ದಿನಗಳು ದೇವರ ನಾಡಿಗೆ ಒಳ್ಳೆಯದಾಗಲಿ ಎನ್ನುವುದೆ ಎಲ್ಲರ ಆಶಯ. . #ವಂದೇಮಾತರಂ







Leave a Reply