ನಿಷೇಧಾಜ್ಞೆ ಹೇರಿ ಜಯಂತಿ ಮಾಡುವುದು ನಾಡಿನ ಸ್ವಾಭಿಮಾನವನ್ನು ಪ್ರಶ್ನಿಸಿದಂತಲ್ಲವೇ???

ಟಿಪ್ಪುವಿನ ಹುಟ್ಟಿದ ದಿನದ ಗೊಂದಲವಿರಿಸಿಕೊಂಡೆ ಮತ್ತೊಮ್ಮೆ ಟಿಪ್ಪುವಿನ ದಿನಾಚರಣೆ ಬಂದು ನಿಂತಿದೆ. ನವೆಂಬರ್ ಎಂದರೆ ಕನ್ನಡ ಕನ್ನಡ ಎನ್ನುತಿದ್ದ ಕರುನಾಡು ಕನ್ನಡ ಕೊಂದವನ ಗುಣಗಾನ ಮಾಡುವ ದುಸ್ಥಿತಿಗೆ ಬಂದು ನಿಂತಿದೆ. ಟಿಪ್ಪು ಎನ್ನುವ ಓಟ್ ಬ್ಯಾಂಕ್ ಅಸ್ತ್ರವನ್ನು ಜನಮಾನಸದ ವಿರೋಧದ ನಡುವೆಯೂ ಪ್ರಯೋಗ ಮಾಡಲು ಸರ್ಕಾರ ಸಿದ್ದವಾಗಿ ನಿಂತಿದೆ. ಇನ್ನೂ ನಾಚಿಕೆಗೇಡಿನ ಸಂಗತಿ ಎಂದರೆ ಜನಸಾಮಾನ್ಯರ ಉಪಸ್ಥಿತಿಯಿಲ್ಲದೆ ನಿಷೇದಾಜ್ಞೆ ಹೇರಿಕೊಂಡು ಕೇವಲ ಸರ್ಕಾರಿ ಅಧಿಕಾರಿಗಳು ಹಾಗು ಕೆಲವು ಪುಡಿ ಮತಾಂದರ ನಡುವೆ ಟಿಪ್ಪು ಎನ್ನುವ ಕ್ರೂರತ್ವವನ್ನು ಗುಣಗಾನ ಮಾಡಲು ಹೊರಟಿರುವುದು. ಕಳೆದ ಮೂರೂ ವರ್ಷಗಳಿಂದ ಈ ನಾಡಿನಲ್ಲಿ ಟಿಪ್ಪು ಜಯಂತಿ ಮಾಡಿ ಕರ್ನಾಟಕ ಸಾಧಿಸಿದ್ದು ಬರಿ ಶೂನ್ಯ,ಆದರೆ ಕಳೆದು ಕೊಂಡಿದ್ದು ಮಾತ್ರ ಸಾಕಷ್ಟಿದೆ. ಸಾಮರಸ್ಯವಿದ್ದ ನಾಡಿನಲ್ಲಿ ಗಲಭೆಗಳು ಶುರುವಾಗಿದೆ,12ಕ್ಕೂ ಹೆಚ್ಚು ಬಿಜೆಪಿ ಹಾಗು ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಬರ್ಬರ ಹತ್ಯೆಯಾಗಿದೆ. ಗಡಿಯಲ್ಲಿ ನಮ್ಮನ್ನು ಕಾಯುವ ಯೋಧರ ನಾಡು ಕೊಡಗು ಅಕ್ಷರಶಹ ಸರ್ಕಾರದ ಎಡಬಿಡಂಗಿ ನಿರ್ಧಾರಕ್ಕೆ ಬೆಂದು ಹೋಗಿದೆ. ಬದುಕಿದ್ದಾಗ ಟಿಪ್ಪು ಕೊಡವರಿಗೆ ಚಿತ್ರ ಹಿಂಸೆ ಕೊಟ್ಟರೆ ಟಿಪ್ಪು ಸತ್ತಮೇಲೆ ಆತನ ಹೆಸರಿನಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕೊಡವರಿಗೆ ಚಿತ್ರ ಹಿಂಸೆ ಕೊಡಲಾರಂಭಿಸಿದ್ದಾರೆ. ಕೊಡವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳಿಸಿದರೆ ಅವರ ಮನೆ ಕಾಪಾಡಬೇಕಿದ್ದ ಸರ್ಕಾರವೇ ಜಿಹಾದಿಗಳು ಕೇರಳದಿಂದ ಬಂದು ಕೊಡವರ ಮನೆಗೆ ಕಲ್ಲು ಹೊಡೆಯುವ ವಾತಾವರಣ ಸೃಷ್ಟಿಸಿ ಕುಟ್ಟಪ್ಪರನ್ನು ಕೊಲ್ಲುವಂತೆ ಮಾಡಿದ್ದು ಮನದಲ್ಲಿ ವೃಣವಾಗಿ ಕುಳಿತಿದೆ. ಐತಿಹಾಸಿಕ ದಾಖಲೆಗಳನ್ನಿಟ್ಟು ಟಿಪ್ಪು ಒಬ್ಬ ಕ್ರೂರಿ, ಮತಾಂದ, ಅತ್ಯಾಚಾರಿ, ಅಧಿಕಾರ ಉಳಿಸಿಕೊಳ್ಳಲು ಪ್ರೆಂಚರ ಸಹಾಯದೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿ ರಣರಂಗದಿಂದ ಓಡಿದವನು ಎನ್ನುವ ಸತ್ಯವನ್ನು ಹೇಳಿದರು ಸಿದ್ದರಾಮಯ್ಯನವರ ಸರ್ಕಾರಕ್ಕೆ ಕಣ್ಣ ಮುಂದೆ ದಂಡಿಯಾಗಿರುವ ಒಟುಗಳು ಎಲ್ಲವನ್ನು ಮರೆಮಾಚಿಸುತ್ತಿದೆ. ಹಾಗಾಗಿ ಟಿಪ್ಪು ಒಬ್ಬ ದೇಶ ಪ್ರೇಮಿ ಕಣ್ರಿ, ಅವನು ಯಾರನ್ನು ಕೊಂದಿಲ್ಲ, ಟಿಪ್ಪು ಜೀವಪರ ಇದ್ದವನು ಯಾರು ಎನೆ ಹೇಳಿದ್ರು ಆತನ ಜಯಂತಿ ಅದ್ದೂರಿಯಾಗಿ ಮಾಡ್ತಿವಿ ಎನ್ನುವ ಅಹಮಿನ ಮಾತುಗಳು ಸಿಎಂ ಸಾಹೇಬರ ಬಾಯಿಯಿಂದ ಉದುರುತ್ತಿರುವುದು.  ಎಸಿ ರೂಮಿನಲ್ಲಿ ಓಲೈಕೆ ರಾಜಕಾರಣಕ್ಕೆ ಅನುಕೂಲವಾಗುವಂತೆ ಬರೆಸಿದ ಟಿಪ್ಪುವಿನ ಇತಿಹಾಸ ಉರುವಲು ಹೊಡೆದ ಈಗಿನ ಯುವ ಪೀಳಿಗೆಯ ನಮಗೆ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಂತೆ ಕಾಣಬಹುದು. ಆದರೆ ನಮ್ಮ ರಾಜ್ಯದ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಮಳುವಳ್ಳಿ, ಕೊಡಗು, ಚಿತ್ರದುರ್ಗ, ಮಂಗಳೂರಿನ ಭಾಗದ 60ವರ್ಷ ದಾಟಿದ ಹಿರಿಯರ ಬಳಿ ಟಿಪ್ಪುವಿನ ಬಗ್ಗೆ ವಿಚಾರಿಸಿದರೆ ಮಾತು ಶುರುವಾದ ತಕ್ಷಣ ಟಿಪ್ಪು ಒಬ್ಬ ಅತ್ಯಾಚಾರಿ, ಮತಾಂದ, ನಮ್ಮ ದೇವಸ್ಥಾನ ಒಡೆದ , ನಮ್ಮ ಹಿರಿಯರನ್ನ ಮತಾಂತರ ಮಾಡಿದ, ನಮ್ಮೂರಿಗೆ ಬೆಂಕಿ ಹಾಕಿದ್ದ, ಕಟಾವಿಗೆ ಬಂದ ಬೆಳೆಗೆ ಬೆಂಕಿ ಹಾಕಿಸುತಿದ್ದ, ಹೀಗೆ ಹತ್ತಾರು ನೊಂದ ಕತೆಯನ್ನು ಹೇಳುತ್ತಾರೆ. ಈ ಕತೆಗಳನ್ನು ಕೇಳಿದರೆ ನಾವು ಓದಿದ ಇತಿಹಾಸಕ್ಕೂ ಜನಸಾಮಾನ್ಯರ ನೆನಪಿನಲ್ಲಿರುವ ಇತಿಹಾಸಕ್ಕೂ ಸಂಬಂಧವೇ ಇಲ್ಲ ಎನಿಸುತ್ತದೆ. ಹೌದು ಭಾರತಕ್ಕೆ ಗೆದ್ದಲು ಹಿಡಿಯುವ ಇತಿಹಾಸದ ಜೊಳ್ಳು ಕತೆಗಳನ್ನು ಪೋಣಿಸಿ ಪುಸ್ತಕಗಳಲ್ಲಿ ಹಿಡಿದಿಡುವ ಮಾನಸಿಕತೆಯೇ ಇರಲ್ಲಿಲ್ಲ. ಎಲ್ಲವನ್ನೂ ಕತೆಗಳ ಮೂಲಕ, ಜಾನಪದದ ಮೂಲಕ, ಲಾವಣಿಗಳ ಮೂಲಕ, ಬಾಯಿಂದ ಬಾಯಿಗೆ ತಲೆಮಾರಿಂದ ತಲೆಮಾರಿಗೆ ದಾಟಿಸಿಯೇ ಇತಿಹಾಸ ಪ್ರಜ್ಞೆಯನ್ನು ಕಾಪಾಟಿಕೊಳ್ಳುತಿತ್ತು. ಆದರೆ ಟಿಪ್ಪುವಿನ ವಿಚಾರದಲ್ಲಿ ಇತಿಹಾಸ ಕೆದಕಿದರು ಆತನ ಕ್ರೂರ ಮುಖ ಬಯಲಾಗುತ್ತಿದೆ, ಸ್ವತಃ ಟಿಪ್ಪುವೇ ಬರೆದ ಪತ್ರಗಳು, ಆತನ ದಾಳಿಗೆ ಒಳಗಾದ ದೇವಸ್ಥಾನಗಳು, ಚರ್ಚ್ ಗಳು, ಆತನ ಮತಾಂಧತೆಯನ್ನು ಎತ್ತಿ ತೋರಿಸುತ್ತಿವೆ. ಇನ್ನು ಸಾಮಾನ್ಯರ ಬಳಿ ಚರ್ಚಿಸಿದರೆ ಅವರ ತಲೆಮಾರುಗಳು ಅನುಭವಿಸಿರುವ ನೋವಿನ ಕತೆಗಳು ಟಿಪ್ಪುವಿನ ರಾಕ್ಷಸಿ ಪ್ರವೃತ್ತಿಯನ್ನು ಬಿಚ್ಚಿಡುತ್ತವೆ. ಇವೆಲ್ಲವುಗಳ ನಡುವೆ ಸರ್ಕಾರ ಆಚರಿಸುತ್ತಿರುವ ಈ ಜಯಂತಿ ಒಬ್ಬ ಜಿಹಾದಿ ಭಯೋತ್ಪಾದಕನ ಬದುಕನ್ನು ನೀವು ಅಳವಡಿಸಿಕೊಳ್ಳಿ ಎಂದು ಕರೆ ಕೊಡುವ ಜಯಂತಿಯಂತೆ ಗೋಚರಿಸುತ್ತಿದೆ.  ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಘನಘೋರವಾದದ್ದು. ಭಗತ್ ಸಿಂಗ್ ರಂತವರು ಕ್ರಾಂತಿಕಾರಿಯಾಗಲು ಪ್ರೇರಣೆ ಕೊಟ್ಟಿದ್ದು ಇದೆ ಬಲಿಧಾನಿಗಳ ರಕ್ತಸಿಕ್ತ ಮಣ್ಣು . ಆದರೆ ಕರ್ನಾಟಕದಲ್ಲೂ ಇಂತಹ ಭೀಕರ ಘಟನೆಯೊಂದು ನಡೆದು ಹೋಗಿದೆ, ಆದರೆ ನಮ್ಮ ದುರಂತ ಏನೆಂದರೆ ನಮ್ಮ ಇತಿಹಾಸ ಇವೆಲ್ಲವನ್ನೂ ಮುಚ್ಚಿಟ್ಟು ಆ ಘನಘೋರ ಹತ್ಯಾಕಾಂಡ ನೆಡೆಸಿದವನನ್ನೆ ಇಂದು ಮೆರೆಸಲು ಹೊರಟಿದೆ. ಕೊಡವರು ತಮ್ಮ ನಾಡಿಗೆ ಹೆಚ್ಚು ವಿಧೇಯರಾಗಿದ್ದರೆ ಇತ್ತ ಮೈಸೂರು ಭಾಗದ ಒಕ್ಕಲಿಗರು ಮೈಸೂರು ಅರಸರಿಗೆ ಹೆಚ್ಚು ವಿಧೇಯರಾಗಿರುತಿದ್ದದ್ದು ಇತಿಹಾಸದಲ್ಲಿ ಉಲ್ಲೇಖ ಅದು ಈಗಲು ಮುಂದುವರೆದಿದೆ. ಹೇಳಿ ಕೇಳಿ ಎರಡು ಜನಾಂಗವು ಆರ್ಥಿಕವಾಗಿ ಸದೃಡವಾಗಿದ್ದವರೆ, ಜೊತೆಗೆ ಯೋಧ ಪರಂಪರೆಯ ಜನಾಂಗಗಳು. ಆ ಕಾರಣಕ್ಕೆ ಟಿಪ್ಪು ಇವರಿಬ್ಬರನ್ನು ಮಣಿಸುವ ಕುತಂತ್ರವನ್ನು ಯಾವಾಗಲು ಮಾಡುತ್ತಲೇ ಇದ್ದ. ತನ್ನ ಇಸ್ಲಾಂ ರಾಜ್ಯ ವಿಸ್ತರಣೆಯ ಕನಸಿಗೆ ಅತಿ ಹೆಚ್ಚು ಕಂಟಕವಾಗಿದ್ದವರು ಕೊಡವರು ಎನ್ನುವುದು ಆತನ ಕೋಪಕ್ಕೆ ಕಾರಣವಾಗಿತ್ತು. ಜೊತೆಗೆ ಹೈದರಾಲಿಯೂ ಕೂಡ ಬದುಕಿದ್ದಾಗಲೇ ಕೊಡಗಿನ ಮೇಲೆ ಕಣ್ಣಿತ್ತು, ಮಂಗಳೂರು ಹಾಗು ಮಲಬಾರಿಗೆ ಸಂಪರ್ಕ ಸಾಧಿಸಲು ಕೊಡಗು ಆಯಾಕಟ್ಟಿನ ಜಾಗವಾದುದರಿಂದ ಕೊಡಗಿನ ಮೇಲೆ ಮೂರೂ ಬಾರಿ ದಾಳಿ ಮಾಡಿ ಕೊನೆಯದಾಳಿಯಲ್ಲಿ ರಾಜನನ್ನಷ್ಟೆ ವಶಪಡಿಸಿಕೊಂಡಿದ್ದ ಆದರೆ ಕೊಡವರು ಮಾತ್ರ ಕಪ್ಪವನ್ನು ತಿರಸ್ಕರಿಸಿ ಪ್ರತಿರೋಧ ಒಡ್ಡುತ್ತಲೆ ಇದ್ದರು. ಹೈದರಾಲಿಯ ಸಾವಿನ ನಂತರ ಟಿಪ್ಪು ಅನೇಕ ಬಾರಿ ಸಂಪೂರ್ಣ ಕೊಡಗನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿ ಪೆಟ್ಟು ತಿಂದು ಒಳೊಗೊಳಗೆ ಕುದಿಯುತಿದ್ದವನು ಮಾಡಿದ್ದೂ ಮಾನವ ಜಗತ್ತು ಬೆಚ್ಚಿ ಬೀಳುವ ಕೌರ್ಯ . ಅದಕ್ಕಾಗಿಯೆ ಕೊಡಗಿನ್ನುದ್ದಕ್ಕೂ ನಾನು ಕೊಡವರೊಂದಿಗೆ ಸ್ನೇಹ ಬೆಸೆಯಲು ಇಚ್ಚಿಸುತ್ತೇನೆ, ನಾನು ಯುದ್ಧ ಮಾಡಿ ಬೇಸತ್ತಿದ್ದೇನೆ ಬನ್ನಿ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ದೇವಟ್ಟಿಪರಂಬು ಮೈದಾನದಲ್ಲಿ ಕೊಡವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದೇನೆ. ಶಸ್ತ್ರಗಳಿಲ್ಲದ ಸ್ನೇಹವನ್ನು ಬಯಸುತ್ತೆನೆ ಎಂದು ಡಂಗುರ ಹೊಡೆಸಿದ. ನಂಬಿದ ಕೊಡವರು ಶಸ್ತ್ರಗಳಿಲ್ಲದೆ ದೇವಟ್ಟಿಪರಂಬುವಿನಲ್ಲಿ ಹೆಂಗಸರು ಮಕ್ಕಳೊಂದಿಗೆ ಬಂದು ಸೇರಿದ್ದರು. ಮೊದಲೆ ನಿಶ್ಚಯಿಸಿದಂತೆ ಟಿಪ್ಪು ಮೈದಾನದ ಸುತ್ತ ಪ್ರೆಂಚರ ಸಹಾಯದೊಂದಿಗೆ ನೆರೆದಿದ್ದ ಕೊಡವರ ಮೇಲೆ ದಾಳಿ ಮಾಡಿ ಬಿಟ್ಟ. ಇತಿಹಾಸವೆ ಬೆಚ್ಚಿ ಬಿಳಿಸುವ ನರಮೇದವೊಂದು ನಡೆದೆ ಹೋಯಿತು. ಮಕ್ಕಳು ಚೀರಾಡಿದವು, ಸೈನಿಕರ ತಲೆಗಳು ದೇಹದಿಂದ ದೂರವಾದವು, ರಾಕ್ಷಸ ಕೃತ್ಯಕ್ಕೆ ತಣ್ಣಗೆ ಹರಿಯುತಿದ್ದ ಕಾವೇರಿಯು ಒಮ್ಮೆ ಬೆಚ್ಚಿರಬಹುದು, ನಿಶಬ್ಧವಾಗಿ ಹಕ್ಕಿಗಳ ಕಲರವರೊಂದಿಗೆ ಸಂಭ್ರಮಿಸುತ್ತಿದ್ದ ಪ್ರಕೃತಿಯ ಮಡಿಲಲ್ಲಿ ಅಂದು ಬರಿ ಕೊಡವರ ಆರ್ತನಾದವೇ ತುಂಬಿತ್ತು. . . .  ಅಂದು ದೇವಟ್ಟಿಪರಂಬುವಿನಲ್ಲಿ ಇತಿಹಾಸಕಾರ ಮಾರ್ಕ್ ವಿಲ್ಕ್ಸ್ ಪ್ರಕಾರ ಕನಿಷ್ಟ ಒಂದು ಲಕ್ಷದಷ್ಟು ಜನ ಸೇರಿದ್ದಾಗಿ ಹೇಳುತ್ತಾನೆ. ೧೮೭೦ ಗೆಜೆಟಿಯರ್ ಆಫ್ ಕೂರ್ಗ್ ನಲ್ಲಿ ೭೦ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರ ಉಲ್ಲೇಖದ ಜೊತೆಗೆ ೩೫ ಸಾವಿರ ಕೊಡವರನ್ನು ನಿರ್ಧಯಿಯಾಗಿ ಕೊಂದದರ ಬಗ್ಗೆ ಬರೆಯಲಾಗಿದೆ. ದೇವಟ್ಟಿ ಪರಂಬು ಹತ್ಯಾಕಾಂಡದ ನಂತರ ಕೊಡವರ ಹೆಣ್ಣುಮಕ್ಕಳನ್ನ ಮುಸ್ಲೀಂ ಸೈನಿಕರಿಗೆ ಹಂಚಿ, ಮಕ್ಕಳ್ಳನ್ನು ಸುನ್ನತ್ ಮಾಡಿ ಮತಾಂತರಿಸಲು ಆದೇಶಿಸಿ, ಸಾಯದೆ ಉಳಿದ ಕೊಡವರನ್ನು ಸರಪಳಿಯಳಿಯಲ್ಲಿ ಕಟ್ಟಿ ಗಂಜಾಂ ಗೆ ಎಳೆತಂದು ಬಲವಂತವಾಗಿ ಮತಾಂತರ ಮಾಡಿದ. ೧೯೨೪ ರ ಪಟ್ಟೋಳೆ ಪಳಮೆ ದಾಖಲೆಯ ಪ್ರಕಾರ ಕೊಡವ ಜನರ ಭೂಮಿಯನ್ನು ಮುಸಲ್ಮಾನರಿಗೆ ಜಹಗೀರಾಗಿ ಕೊಟ್ಟು ಅಳಿದುಳಿದ ಕೊಡವರನ್ನು ಹುಡುಕಿ ಕೊಲ್ಲಿ ಎನ್ನುವ ಆಜ್ಞೆ ಕೊಟ್ಟಿರುವ ಉಲ್ಲೇಖವಿದೆ. ಇಂತಹ ಭೀಕರ ನರಮೇದದ ಬಗ್ಗೆ ನಮ್ಮ ಶಾಲೆಯ ಇತಿಹಾಸ ಪುಸ್ತಕಗಳು ಎಕೆ ತಿಳಿಸಲಿಲ್ಲ, ಜಗತ್ತಿನ ಉದ್ದಗಲಕ್ಕೂ ಇಂತಹ ಘಟನೆಗಳನ್ನು ಉಲ್ಲೇಖಿಸಿ ಸ್ಮಾರಕ ಕಟ್ಟಿ ಶಾಂತಿಯ ಪಾಠ ಹೇಳುವ ಮಾನವತಾವಾದಿಗಳು ಎಲ್ಲಿ ಹಾಳಾಗಿ ಹೋದರು ?. ಕೊಡಗಿನ ಹಿಂದೂಗಳು ತಮ್ಮ ಪೂರ್ವಜರ ಮೇಲಾದ ಇಂತಹ ಕ್ರೂರ ಘಟನೆಗಳನ್ನು ಹೇಗೆ ಮರೆಯಲು ಸಾಧ್ಯ. ನೋವುಂಡವರ ಮದ್ಯೆ ಕೊಲೆಪಾತಕನ ಜಯಂತಿ ಮಾಡಿದರೆ ಸಹಿಸಲು ಸಾಧ್ಯವಿದೆಯೆ?. ಇನ್ನು ಟಿಪ್ಪುವಿನ ಕ್ರೂರತನ ಕೇವಲ ಹಿಂದುಗಳನ್ನು ಮಾತ್ರ ಕಾಡಿಲ್ಲ ಮಂಗಳೂರಿನ ಭಾಗದ ಕ್ರಿಶ್ಚಿಯನ್ ರನ್ನು ಹಿಂಸಿಸಿದ್ದಾನೆ ಈ ಕ್ರೂರಿ. ೨೭ ಚರ್ಚ್ ಗಳಲ್ಲಿ ೨೫ ಚರ್ಚ್ ಗಳನ್ನೂ ಒಡೆದು ಹಾಕಿರುವ ಇತಿಹಾಸ ಕಣ್ಣ ಮುಂದಿದೆ. ಬಂಟವಾಳ ತಾಲೂಕಿನಲ್ಲಿ ಸಾವಿರಾರು ಕ್ರೈಸ್ತರನ್ನು ಮಾರಣ ಹೋಮ ಮಾಡಿದ್ದನ್ನು ನೆನಪಿಸಲು ನೆತ್ತರ ಕೆರೆ ನಮ್ಮ ಮುಂದೆ ಈಗಿರುವ ಜೀವಂತ ಸಾಕ್ಷಿ. ಇನ್ನು ೭೦೦ ಕ್ಕೂ ಹೆಚ್ಚು ಮಂಡ್ಯಯಂ ಅಯ್ಯಂಗಾರ್ ಗಳನ್ನೂ ತಲೆಕಡಿದು ತನ್ನ ಕ್ರೂರತ್ವವನ್ನು ಪ್ರದರ್ಶನ ಮಾಡಿದ ರಾಕ್ಷಸಿ ಪ್ರವೃತ್ತಿ ಈತನದು ಇಂತಹ ವ್ಯಕ್ತಿತ್ವವನ್ನು ನಾಡಿನಲ್ಲಿ ಸಂಭ್ರಮಿಸಬೇಕೇ,  ನಾಡಿನ ಜನ ಸರ್ಕಾರವೇ ಜಯಂತಿಯನ್ನು ಸಂಭ್ರಮಿಸುವುದನ್ನು ಸಹಿಸಿಕೊಂಡು ಸುಮ್ಮನಿರಬೇಕೇ. .  ಶ್ರೀರಂಗ ಪಟ್ಟಣದ ಟಿಪ್ಪು ಅರಮನೆಗೆ ಹೋಗುವ ಹೆಬ್ಬಾಗಿಲಿಗೆ ರಾಚುವಂತೆ ಮಸೀದಿಯೊಂದು ಕಾಣುತ್ತದೆ ಒಮ್ಮೆ ಹೊರಗಡೆಯಿಂದ ಆ ಮಸೀದಿಯನ್ನು ಸುಮ್ಮನೆ ಗಮನಿಸಿದರು ಸಾಕು ಅದು ಹಿಂದೂ ದೇವಾಲಯ ಎನ್ನುವುದು ಸ್ಪಷ್ಟವಾಗುತ್ತದೆ. ಹೌದು ಅದು ಆಂಜನೇಯ ದೇವಸ್ಥಾನ,  ಆ ದೇವಸ್ಥಾನ ಇಂದು ಇಸ್ಲಾಂ ಪಾಠ ಮಾಡುವ ಮದರಸ ಹಾಗು ಮಸೀದಿ. ಈ ಮಸೀದಿಯ ಒಳಗೆ ಒಮ್ಮೆ ಕಾಲಿಟ್ಟರೆ ಒಂದು ದೇವಾಲಯಕ್ಕೆ ಇರುವ ಎಲ್ಲಾ ಕುರುಹುಗಳು ಎದ್ದು ಕಾಣುತ್ತವೆ. ಮುಸಲ್ಮಾನರೆ ಇಲ್ಲದ ಆ ಜಾಗದಲ್ಲಿ ಮದರಸವೇಕೆ ಎಂದು ಯಾರು ಕೇಳಲಿಲ್ಲ. ಪ್ರಾಚ್ಯಾವಸ್ತು ಇಲಾಖೆಗೆ ಯಾಕೆ ಆ ವಿವಾದಿತ ಜಾಗವನ್ನು ಮದರಸ ಮಾಡಲು ಬಿಟ್ಟಿದ್ದೀರಾ ಎಂದು ನಾವು ಪ್ರಶ್ನಿಸಲಿಲ್ಲ! ಹಿಂದೂಗಳು ಅಷ್ಟೊಂದು ಅಸಹಿಷ್ಣುಗಳು! . ಟಿಪ್ಪು ಅಬ್ಬರದ ದಿನಗಳಲ್ಲಿ ಒಡೆದಿದ್ದು ಬರೋಬ್ಬರಿ ೮೦೦೦ ಸಾವಿರ ದೇವಸ್ಥಾನಗಳು, ಕೊಡಗಿನ ಕುಶಾಲನಗರದಿಂದ ಪೊನ್ನಪೇಟೆಯವರೆಗೆ ಉದ್ದಕ್ಕೂ ದೇವಸ್ಥಾನಗಳನ್ನು ಒಡೆದಿರುವುದು ಇಂದಿಗೂ ಎದ್ದು ಕಾಣುತ್ತಿವೆ. ವಿರಾಜಪೇಟೆಯ ಭಗವತಿ ದೇವಸ್ಥಾನ, ಭಾಗಮಂಡಲದ ಭಗಂಡೇಶ್ವರ ದೇವಸ್ಥಾನ,  ಬೊಳ್ಳು ಮಾಡು ಈಶ್ವರ ದೇವಸ್ಥಾನ. . . ಪಟ್ಟಿ ಸಾಗುತ್ತಲೆ ಹೋಗುತ್ತದೆ. ಹುಡುಕಿದಷ್ಟು ಕೆದಕಿದಷ್ಟು ಟಿಪ್ಪುವಿನ ಕ್ರೂರ ಮುಖ ಅನಾವರಣಗೊಳ್ಳುತ್ತಲೆ ಹೋಗುತ್ತದಲ್ಲ ಹೀಗಿದ್ದೂ ನಾವು ಟಿಪ್ಪುವಿನ ಜಯಂತಿ ಮಾಡಲು ಮನಸ್ಸು ಮಾಡಬೇಕಾ?. ಕನ್ನಡ ನಾಡಿನಲ್ಲಿ ಪರ್ಷಿಯನ್ ಭಾಷೆ ಹೇರಿ ಆಡಳಿತ ಭಾಷೆಯನ್ನಾಗಿಸಿ ಕರುನಾಡಿನ ಹಲವು ಪಟ್ಟಣಗಳಿಗೆ ಮತೀಯ ಹೆಸರಿಟ್ಟ ಕನ್ನಡ ದ್ರೋಹಿಗೆ ಕರ್ನಾಟಕ ಏಕೀಕರಣವಾದ ತಿಂಗಳಲ್ಲೆ ಸನ್ಮಾನ!.  ಇದಕ್ಕಿಂತ ದುರಂತ ಈ ನಾಡಿಗೆ ಬೇರೇನಿದೆ. ಟಿಪ್ಪು ಏನು ಮಾಡಿಲ್ರಿ ನಿಮಗೆ ಮಾಡಕ್ಕೆ ಕೆಲ್ಸ ಇಲ್ಲ ಅದಕ್ಕೆ ವಿರೋದಿಸ್ತೀರಿ ಎನ್ನುವ ಸಿಎಂ ಸಾಹೇಬರು ಟಿಪ್ಪುವಿನ ಖಡ್ಗವನ್ನೊಮ್ಮೆ ನೋಡಬೇಕಿದೆ ” ಇಸ್ಲಾಂ ಒಪ್ಪದವರನ್ನು ಕೊಲ್ಲಲೆಂದು ಈ ಖಡ್ಗ” ಎಂದು ಬರೆದಿರುವುದು ಕಾಣುತ್ತದೆ. ಇಷ್ಟೆಲ್ಲಾ ಸಾಕ್ಷಿಗಳಿದ್ದು, ಐತಿಹಾಸಿಕ ಸತ್ಯಗಳಿದ್ದರು ಕೇವಲ ಓಟ್ ಬ್ಯಾಂಕ್ ಗೋಸ್ಕರ ನಿಷೇದಾಜ್ಞೆ ಹೇರಿ ಜಯಂತಿ ಮಾಡುವುದಾದರೆ ಇದು ನಾಡಿನ ಜನರ ಮಾನ ಅಭಿಮಾನ ಸ್ವಾಭಿಮಾನ ಪ್ರಶ್ನಿಸಿದಂತೆ. ಇಂತಹ ನೀಚ ರಾಜಕಾರಣಕ್ಕೆ ನಾಡು ಉತ್ತರ ಕೊಡುವ ಜರೂರತ್ತಿನ ಜೊತೆಗೆ ಶಾಲೆಯಲ್ಲಿ ಕಲಿಸಿರುವ ಕಾಂಗ್ರೆಸ್ ಕೃಪೋಷಿತ ಸುಳ್ಳು ಇತಿಹಾಸವನ್ನು ದಿಕ್ಕರಿಸಿ ಮುಂದಿನ ಪೀಳಿಗೆಗೆ ನೈಜ್ಯ ಇತಿಹಾಸವನ್ನು ತಿಳಿಸಲೆಬೇಕಿದೆ. .

Categories: , , ,

Leave a Reply

Your email address will not be published. Required fields are marked *